ಕೊಪ್ಪಳ | ಬಲ್ಡೋಟಾ ಹೋರಾಟಗಾರರಿಗೆ ಜಾಮೀನು ಮಂಜೂರು

ಕೊಪ್ಪಳ: ಬಲ್ಡೋಟಾ ಬಿಎಸ್‌ಪಿಎಲ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ 7 ಜನ ಹೋರಾಟಗಾರರಿಗೆ ಜಾಮೀನು ದೊರಕಿದೆ.
ಬಸ್ಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತ ಗೊಳಿಸಬೇಕೆಂದು ಆಗ್ರಹಿಸಿ ಇತ್ತೀಚಿಗೆ ಜನಜಾನುವಾರು ಹೋರಾಟವನ್ನು ನಡೆಸಿ ಕಾರ್ಖಾನೆಯ ಕಾಪೌಂಡ್ ಗೆ ಪ್ರವೇಶಿಸಲು ಹೋದಾಗ ಕಾರ್ಖಾನೆಯ ಸಿಬ್ಬಂದಿ ಮತ್ತು ಹೋರಾಟಗಾರರ ನಡುವೆ ಘರ್ಷಣೆ ಉಂಟಾಗಿತ್ತು. ಈ ಕುರಿತು ಎರಡು ಪಕ್ಷಗಳಿಂದ ಪ್ರಕರಣ ದಾಖಲಿಸಲಾಗಿತ್ತು.
ಆದರಂತೆ ಕಂಪನಿ ಹಾಕಿದ ಎರಡು ಕೇಸಲ್ಲಿ ತಲಾ ಏಳು ಜನರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಕೇಸ್ ನಂ. 131/2025 ರಲ್ಲಿ ಅಲ್ಲಮಪ್ರಭು ಬೆಟ್ಟದೂರು, ಮಂಗಳೇಶ ರಾಠೋಡ, ಮುದಕಪ್ಪ ಹೊಸಮನಿ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಭೀಮಸೇನ ಕಲಕೇರಿ ಮತ್ತು ಎಸ್. ಎ. ಗಫಾರ್ ಹಾಗೂ ಕೇಸ್ ನಂ. 81/2025 ರಲ್ಲಿ ಮೂಕಪ್ಪ ಮೇಸ್ತ್ರೀ ಬಸಾಪೂರ, ಯಮನೂರಪ್ಪ ಹಾಲಳ್ಳಿ ಬಸಾಪೂರ, ಭೀಮಸೇನ ಕಲಕೇರಿ, ಯಗ್ಗಪ್ಪ ಲಿಂಗದಳ್ಳಿ ಬಸಾಪೂರ, ಕೆ. ಬಿ. ಗೋನಾಳ, ಮಂಗಳೇಶ ರಾಠೋಡ ಗಿಣಗೇರಿ ಮತ್ತು ಅಲ್ಲಮಪ್ರಭು ಬೆಟ್ಟದೂರುರಿಗೆ ಜಿಲ್ಲಾ ನ್ಯಾಯಾಲಯ ಬೇಲ್ ಮಂಜೂರು ಮಾಡಿದ್ದು, ಹೋರಾಟಗಾರರ ಪರವಾಗಿ ವಕೀಲರಾದ ಡಿ.ಹೆಚ್. ಪೂಜಾರ ಅವರು ವಾದ ಮಾಡಿದ್ದಾರೆ.







