ಕೊಪ್ಪಳ | ಸ್ವಾತಂತ್ರ‍್ಯ ಹೋರಾಟಗಾರರಾದ ಸುಮಂತರಾವ್ ಪಟವಾರಿ ಅವರಿಗೆ ಗಣತಿ ಪತ್ರ ವಿತರಣೆ

ಕೊಪ್ಪಳ ಜೂನ್ 30 : ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಇಟ್ನಾಳ ಅವರು ಜೂನ್ 30ರಂದು ಹಳೆಯ ಕೊಪ್ಪಳದ ಕೋಟೆ ಪ್ರದೇಶದ ನಿವಾಸಿ, ಸ್ವಾತಂತ್ರ‍್ಯ ಹೋರಾಟಗಾರರಾದ ಶ್ರೀ ಸುಮಂತರಾವ್ ಪಟವಾರಿ ಅವರ ಮನೆಗೆ ಭೇಟಿ ನೀಡಿ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯ ಗಣತಿ ನಮೂನೆಯನ್ನು ವಿತರಿಸಿದರು.
ಮಿಟ್ಟಿಕೇರಿ ವಾರ್ಡ ನಂಬರ್ 06ರ ಭಾಗ ಸಂಖ್ಯೆ 106ರ ಮತದಾರರ ಪಟ್ಟಿಯಲ್ಲಿರುವ 95ರ ವಯೋಮಾದ ಹಿರಿಯರಾದ ಸುಮಂತರಾವ್ ಅವರ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ ಅವರೊಂದಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಗಣತಿ ನಮೂನೆ ನೀಡಿದರು.
ಈ ವೇಳೆ ತಹಶೀಲ್ದಾರ್ ಬಸವರಾಜ ತನ್ನಳ್ಳಿ, ಸುಮಂತರಾವ್ ಅವರ ಪುತ್ರ ವಾಸುದೇವ ಕುಲಕರ್ಣಿ (ಪಟವಾರಿ), ಮೊಮ್ಮಗ ಕಿರಣಕುಮಾರ ಕುಲಕರ್ಣಿ (ಪಟವಾರಿ), ಬಿಎಲ್‌ಓ ಪಾತಿಮಾ ಬೇಗಂ ಇದ್ದರು.
Next Story




