ಕೊಪ್ಪಳ | ಜು.14ರಂದು ಸಿಜಿಕೆ ರಂಗಪುರಸ್ಕಾರ ಕಾರ್ಯಕ್ರಮ
ಬಸವರಾಜ್ ಹೆಸರೂರು, ಹಾಲಯ್ಯ ಹುಡೇಜಾಲಿ, ನಾಗರಾಜ್ ಇಂಗಳಗಿ ಅವರಿಗೆ ಸಿಜಿಕೆ ರಂಗಪುರಸ್ಕಾರ

ಕೊಪ್ಪಳ : ಸಿಜಿಕೆ ರಂಗದಿನಾಚರಣೆಯಂದು ನಡೆಯುವ ಸಿಜಿಕೆ ರಂಗಪುರಸ್ಕಾರ ಕಾರ್ಯಕ್ರಮವು ನಾಳೆ ( ಸೋಮವಾರ) ನಡೆಯಲಿದ್ದು, ಈ ಬಾರಿ ಕೊಪ್ಪಳ ಜಿಲ್ಲೆಯ ಮೂವರು ರಂಗಕರ್ಮಿಗಳಿಗೆ ಸಿಜಿಕೆ ರಂಗಪುರಸ್ಕಾರ ಘೋಷಣೆ ಮಾಡಲಾಗಿದೆ ಎಂದು ಸಂಘಟಕರಾದ ರಾಜಬಕ್ಷಿ ಹೆಚ್.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಹಿರಿಯ ರಂಗಕರ್ಮಿಗಳಾದ ಬಸವರಾಜ್ ಹೆಸರೂರು, ಹಾಲಯ್ಯ ಹುಡೇಜಾಲಿ ಹಾಗೂ ನಾಗರಾಜ್ ಇಂಗಳಗಿ ಇವರಿಗೆ ಸಿಜಿಕೆ ರಂಗ ಪುರಸ್ಕಾರಗಳನ್ನು ಘೋಷಣೆ ಮಾಡಲಾಗಿದೆ.
ಇಂದು ಕೊಪ್ಪಳ ವಿಶ್ವವಿದ್ಯಾಲಯ, ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಕವಿ ಸಮೂಹ, ಸೇವಾ & ಡೇವ್ಸ್, ಬಹುತ್ವ ಬಳಗ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದ್ದು, ಈ ಕಾರ್ಯಕ್ರಮವು ನಾಳೆ (ಜು.14, 2025 ಸೋಮವಾರ) ಬೆಳಗ್ಗೆ 11 ಗಂಟೆಗೆ ಕೊಪ್ಪಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರುರಿನ ಸದಸ್ಯರಾದ ಚಾಂದ್ ಪಾಷಾ ಕಿಲ್ಲೆದಾರ್, ಹಿರಿಯ ಪತ್ರಕರ್ತರಾದ ನಾರಾಯಣರಾವ್ ಕುಲಕರ್ಣಿ. ಪ್ರೊ.ಕೆ.ವಿ.ಪ್ರಸಾದ ಕುಲಸಚಿವರು (ಪ್ರಭಾರ) ಕೊಪ್ಪಳ ವಿಶ್ವವಿದ್ಯಾಲಯ, ಸುರೇಶ್ ಡಿ.ಸಿಪಿಐ, ಕೊಪ್ಪಳ ಗ್ರಾಮೀಣ ಠಾಣೆ, ಕೊಪ್ಪಳ, ಡಾ.ಸುರೇಶ್ ಜಿ. ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ, ತಿಮ್ಮಾರಡ್ಡಿ ಮೇಟಿ ಆಗಮಿಸಲಿದ್ದಾರೆ.
ಆಸಕ್ತ ರಂಗ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.







