ಕೊಪ್ಪಳ: ಮಗು ಮೃತ್ಯು; ತಾಯಿಯ ವಿರುದ್ಧ ಪ್ರಕರಣ ದಾಖಲು

ಕನಕಗಿರಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅನಾರೋಗ್ಯ ಪೀಡಿತ ಮಗುವಿಗೆ ಊದಿನ ಕಡ್ಡಿಯಿಂದ ಸುಟ್ಟ ಕಾರಣ ಮಗು ಸಾವನ್ನಪ್ಪಿದ ಘಟನೆಯಲ್ಲಿ ತಾಯಿಯನ್ನೇ ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿದೆ.
2024ರ ನವೆಂಬರ್‌ನಲ್ಲಿ ಏಳು ತಿಂಗಳ ಮಗುವಿಗೆ ಅನಾರೋಗ್ಯ ಕಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮಗುವಿಗೆ ದೇಹದ ಮೇಲೆ ಸುಟ್ಟ ಗಾಯ ಕಂಡುಬಂದಿದ್ದು, ವೈದ್ಯರು ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿನೀಡಿದ್ದರು. ಜಿಲ್ಲಾ ಮಟ್ಟದ ಶಿಶುಮರಣ ಪರಿಶೀಲನಾ ಸಭೆ ವೇಳೆ ಈ ವಿಷಯ ಗಮನಕ್ಕೆ ಬಂದಿದೆ. ಊದಿನಕಡ್ಡಿಯಿಂದ ಸುಟ್ಟಿದ್ದಕ್ಕೆ ನಂಜಾಗಿ ಮಗು ಮೃತಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದರು.
ಮಗುವಿನ ಸಾವಿಗೆ ಕಾರಣವಾದ ತಾಯಿಯ ವಿರುದ್ಧವೇ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೂರು ನೀಡಿದ್ದು, ಈ ಕುರಿತು ಎಫ್.ಐ.ಆರ್. ದಾಖಲಿಸಿದ್ದಾರೆ.
Next Story