ಕೊಪ್ಪಳ | ಸಿಲಿಂಡರ್ ಸ್ಫೋಟ ಪ್ರಕರಣ : ಗಾಯಗೊಂಡಿದ್ದ ಇಬ್ಬರು ಮೃತ್ಯು

ರಾಜಣ್ಣ, ಸುರೇಶ್
ಕೊಪ್ಪಳ/ಗಂಗಾವತಿ, ಡಿ.17: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ.
ಸುರೇಶ್ (29) ಎಂಬ ಯುವಕ ಈ ಮೊದಲೇ ಮೃತಪಟ್ಟಿದ್ದರೆ, ರಾಜಣ್ಣ (40) ಎಂಬವರು ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಂಟು ದಿನಗಳ ಹಿಂದೆ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು ಮನೆಯಲ್ಲಿದ್ದ ರಾಜು, ದುರಗೆಪ್ಪ, ಸುರೇಶ್, ಹುಸೇನಮ್ಮ, ನಾಗರಾಜ್, ವಿಷ್ಣು, ಶ್ರೀಕಾಂತ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಗಾಯದ ತೀವ್ರತೆಯನ್ನು ಗಮನಿಸಿದ ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕಳುಹಿಸಿದ್ದರು.
Next Story





