ಕೊಪ್ಪಳ | ಸಮಸ್ಯೆ ಹೇಳಲು ಠಾಣೆಗೆ ಬಂದ ದಲಿತ ಯುವಕನ ಮೇಲೆ ಪಿಎಸ್‌ಐ ನಿಂದ ಹಲ್ಲೆ; ಆರೋಪ

ಠಾಣೆ ಎದುರು ದಲಿತ ಸಮುದಾಯದವರಿಂದ ಪ್ರತಿಭಟನೆ
ಕೊಪ್ಪಳ : ಸಮಸ್ಯೆ ಹೇಳಲು ಠಾಣೆಗೆ ಬಂದ ದಲಿತ ಯುವಕನ ಮೇಲೆ ಕುಕನೂರು ಪಿಎಸ್‌ಐ ಗುರುರಾಜ್ ಅವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಹಲ್ಲೆ ನಡೆಸಿದ ಪಿಎಸ್‌ಐರನ್ನು ಅಮಾನತು ಮಾಡಲು ಆಗ್ರಹಿಸಿ ಕುಕನೂರು ಪೊಲೀಸ್ ಠಾಣೆ ಎದುರು ದಲಿತ ಸಮುದಾಯದವರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಗಾಳೆಪ್ಪ ಹಿರೇಮನಿ ಎಂಬವರು ತಮ್ಮ ಸಂಬಂಧಿಕರ ಸಮಸ್ಯೆಯನ್ನು ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿದ್ದಕ್ಕೆ ಪಿಎಸ್‌ಐ ಅವರು ಕೊರಳ ಪಟ್ಟಿ ಹಿಡಿದು, "ನೀವು ಮಾದಿಗರು ಐದು ನೂರು ರೂಪಾಯಿಗೆ ಚಿಲ್ಲರೆ ಕೆಲಸ ಮಾಡುತ್ತೀರಿ, ನಿಮ್ಮಿಂದ ನಾನು ಕೆಲಸ ಕಲಿಯುವ ಅಗತ್ಯ ಇಲ್ಲ" ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನನಗೆ ಮನ ಬಂದಂತೆ ಹೊಡೆದಿದ್ದಾರೆ, ಇದರಿಂದ ನನ್ನ ತಲೆ ಮತ್ತು ಕೈಗೆ ಗಾಯಗಳಾಗಿವೆ. ನನಗೆ ನ್ಯಾಯಬೇಕೆಂದು ಗಾಳೆಪ್ಪ ಅವರು ಆಗ್ರಹಿಸಿದ್ದಾರೆ.
Next Story





