ಕೊಪ್ಪಳ | ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಿಐಒನಿಂದ ಪ್ರತಿಭಟನೆ

ಕೊಪ್ಪಳ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ಜಿಐಒ (ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ) ನಿಂದ ಜಿಲ್ಲಾಡಳಿ ಭವನ ಮುಂದೆ ಪ್ರತಿಭಟನೆ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಕ್ಸಾ ಗೋಹರ್ ಅವರು, ಈ ಕಾಯ್ದೆಯು ವಕ್ಫ್ ಸಂಸ್ಥೆಗಳ ಸಮಗ್ರತೆ ಮತ್ತು ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ನಿಬಂಧನೆಗಳನ್ನು ಒಳಗೊಂಡಿದ್ದು, ಇದರಿಂದ ನಮ್ಮ ಸಮುದಾಯದ ಜನರಲ್ಲಿ ಕಳವಳವನ್ನು ಉಂಟುಮಾಡಿದೆ ಎಂದು ಹೇಳಿದರು.
ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದ ಐತಿಹಾಸಿಕವಾಗಿ ದತ್ತಿ ಭೂಮಿಯನ್ನು ಅಪಾಯಕ್ಕೆ ಸಿಲುಕಿಸುವುದು ಈ ಕಾಯ್ದೆಯ ಹಿಂದಿನ ಉದ್ದೇಶವಾಗಿದ್ದು, ಕರಾಳ ಕಾನೂನು, ಸ್ವೀಕಾರಾರ್ಹವಲ್ಲ ವಕ್ಫ್ ಆಸ್ತಿಗಳ ಪ್ರಕಾರಗಳು ಮತ್ತು ಅವುಗಳ ಬಳಕೆ ಮತ್ತು ರಕ್ಷಣೆ, ವಕ್ಫ್ ಕಾನೂನುನಿನಲ್ಲಿ ಇರುವ ಅಂಶಗಳನ್ನು ತಿಳಿಸಿದ ಅವರು, ವಕ್ಫ್‌ನ ಕಲ್ಯಾಣ ವ್ಯವಸ್ಥೆಯನ್ನು ಹಾಳುಮಾಡಲು ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಐಒನ ರಾಜ್ಯ ಉಪಾಧ್ಯಕ್ಷೆ ಅನೀಸ್ ಫಾತಿಮಾ, ಜಿಲ್ಲಾ ಸಂಘಟಕಿ ಖನ್ಸಾ ಗೋಹರ್, ಸ್ಥಳೀಯ ಅಧ್ಯಕ್ಷೆ ಮೆಹೇಕ್ ಸಮರೀನ್, ಫಕೀಯ ಸುಂದೂಸ್, ಸುಮಯ್ಯ ಪಟೇಲ್, ಮೆಹರೂನ್ನಿಸ, ಅಲಿಷಾ ಬೇಗಂ, ಉಮ್ಮೆ ಸಲ್ಮಾ, ಸಭಿಯ ಪಟೇಲ್ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದರು.







