ಕೊಪ್ಪಳ | ಮನೆ ಕಳ್ಳತನ ಪ್ರಕರಣ : ಅಪರಾಧಿಗೆ 3 ವರ್ಷ ಜೈಲು

ಕೊಪ್ಪಳ.ಡಿ.22: ಕಾರಟಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪದ ಮನೆಯೊಂದರಲ್ಲಿ ನಡೆದಿದ್ದ ಬಂಗಾರದ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ನ್ಯಾಯಾಲಯವು ಅಪರಾಧಿಗೆ 3 ವರ್ಷ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2025ರ ಜ.27ರಂದು ಕಾರಟಗಿ ಪಟ್ಟಣದ ನಿವಾಸಿ ದಿಗಂಬರ ಎಂಬುವವರ ಮನೆಗೆ ನುಗ್ಗಿ ಕಳ್ಳರು ಬೀಗ ಮುರಿದು ಸುಮಾರು 5 ತೊಲೆ ಬಂಗಾರದ ಆಭರಣ ಕಳ್ಳತನ ಮಾಡಿದ್ದರು. ಈ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಕಾರಟಗಿ ಪಿ.ಎಸ್.ಐ ಕಾಮಣ್ಣ ಶಿವಪ್ರಸಾದ ಅಲಿಯಾಸ್ ಶಿವಕುಮಾರ ಶಿವು ಎಂಬಾತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಗಂಗಾವತಿಯ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ (ಪ್ರಭಾರ) ನ್ಯಾಯಾಧೀಶ ನಾಗೇಶ ಪಾಟೀಲ ವಿಚಾರಣೆ ನಡೆಸಿ, ಗುರುವಾರ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
Next Story





