ಕೊಪ್ಪಳ | ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ

ಕಾರಟಗಿ, ಅ.31: ಪತ್ನಿಯೊಡನೆ ಜಗಳವಾಡಿ ಹಣ ನೀಡುವಂತೆ ಪೀಡಿಸಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿದ್ದ ರಾಮಣ್ಣ ಆರೋಪಿಯಾಗಿದ್ದು, ಆತ ಕುಡಿತದ ಚಟಕ್ಕೆ ಬಿದ್ದು ತನ್ನ ಪತ್ನಿ ದ್ಯಾವಮ್ಮ(ಜ್ಯೋತಿ)ಗೆ ಹಣ ನೀಡುವಂತೆ ಪೀಡಿಸಿ ಬಳಿಕ ಹತ್ಯೆಗೈದಿದ್ದ ಎನ್ನಲಾಗಿದೆ.
Next Story





