ಕೊಪ್ಪಳ | ಪತ್ರಕರ್ತರು ಸಮಾಜದ ಕನ್ನಡಿಯಂತೆ : ದೇಸಾಯಿ

ಗಂಗಾವತಿ: ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಪತ್ರಕರ್ತರು ಸಮಾಜದ ಕನ್ನಡಿಯಂತೆ. ಪತ್ರಕರ್ತನೆಂಬ ಕನ್ನಡಿಯ ಮೇಲೆ ಯಾವುದೇ ಆಮಿಷಗಳೆಂಬ ದೂಳು ಮೆತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಿದರೆ ಮಾತ್ರವೇ ಸತ್ಯ ದರ್ಶನ ಮಾಡಲು ಸಾಧ್ಯ ಎಂದು ಗಂಗಾವತಿ ಆವೃತಿ ವಿಜಯವಾಣಿ ಸ್ಥಾನಿಕ ಸಂಪಾದಕ ಜಗನ್ನಾಥ ದೇಸಾಯಿ ಹೇಳಿದರು.
ನಗರದ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಂಗಾವತಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕರ್ಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಸಮಾಜದಲ್ಲಿ ನಡೆಯುವ ವಿದ್ಯಮಾನವನ್ನು ಇದ್ದಹಾಗೆ ತೋರಿಸಿದಾಗ ಮಾತ್ರವೇ ಸಮಾಜವನ್ನು ತಿದ್ದಲು ಸಾಧ್ಯ. ಎಲ್ಲೋ ಮೂಲೆಯಲ್ಲಿರುವ ವ್ಯಕ್ತಿಗಳಿಗೂ ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ತಿಳಿಸುವ ಕೆಲಸವನ್ನು ಮಾಡುವ ಪತ್ರಿಕಾ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದೆ ಎಂದರು.
ಡಾ.ಮಮ್ತಾಜ ಬೇಗಂ, ರಾಘವೇಂದ್ರ ಚೌಡ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ತಾಯಪ್ಪ ಮರ್ಚೇಡ್, ಖಾಜಾಸಾಬ ಗಡಾದ್, ಅಭಿಷೇಕ ಸಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿ ರಮೇಶ ಗಾಣದಾಳ ನಿರೂಪಿಸಿದರು, ಉಮೇಶ ಬರಗೂರು ಸ್ವಾಗತಿಸಿದರು.







