ಕೊಪ್ಪಳ | ಗವಿಮಠ ಜಾತ್ರಾಮಹೋತ್ಸವಕ್ಕೆ ಬೃಹತ್ ಪ್ರಮಾಣದಲ್ಲಿ ಮೈಸೂರು ಪಾಕ್ ತಯಾರಿ

10 ರಿಂದ 12 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆ
ಕೊಪ್ಪಳ: ಗವಿಮಠ ಜಾತ್ರಾಮಹೋತ್ಸವದ ಅಂಗವಾಗಿ ಆಗಮಿಸುವ ಭಕ್ತಾದಿಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಮೈಸೂರು ಪಾಕ್ ತಯಾರಿಸಲಾಗುತ್ತಿದೆ. ಪ್ರಸಾದ ತಯಾರಿಕೆಗೆ 60 ಕ್ವಿಂಟಲ್ ಸಕ್ಕರೆ, 5,000 ಲೀಟರ್ ಅಡುಗೆ ಎಣ್ಣೆ, 30 ಕ್ವಿಂಟಲ್ ಕಡಲೆ ಹಿಟ್ಟು, 5 ಕ್ವಿಂಟಲ್ ಮೈದ ಹಿಟ್ಟು, 30 ಕ್ವಿಂಟಲ್ ತುಪ್ಪ ಹಾಗೂ 50 ಕೆಜಿ ಏಲಕ್ಕಿ ಬಳಸಲಾಗುತ್ತಿದೆ.
ಈ ಪ್ರಮಾಣದಲ್ಲಿ ತಯಾರಿಸಲಾಗುತ್ತಿರುವ ಮೈಸೂರು ಪಾಕ್ ಅನ್ನು ಅಂದಾಜು 10ರಿಂದ 12 ಲಕ್ಷ ಭಕ್ತರು ಸೇವಿಸಬಹುದಾಗಿದೆ.
ಮೈಸೂರು ಪಾಕ್ ತಯಾರಿಕೆಗೆ ಅಥಣಿ, ಧನಾವರ, ಮಸ್ಕಿ, ಗಬ್ಬುರ್, ಬಳಗಾನೂರು, ತಾವರಗೇರಾ ಸೇರಿದಂತೆ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಬಾಣಸಿಗರು ಸ್ವಯಂಪ್ರೇರಿತರಾಗಿ ಆಗಮಿಸಿ ತಯಾರಿಕಾ ಕಾರ್ಯದಲ್ಲಿ ತೊಡಗಿದ್ದಾರೆ. ಇವರಿಗೆ ಸಹಾಯಕರಾಗಿ ಹಾಗೂ ಇತರೆ ವ್ಯವಸ್ಥೆಗಳ ನಿರ್ವಹಣೆಗೆ 200ಕ್ಕೂ ಹೆಚ್ಚು ಜನರು ಸೇವೆಯಲ್ಲಿ ನಿರತರಾಗಿದ್ದಾರೆ.
Next Story







