ಕೊಪ್ಪಳ ಗವಿಮಠ ಜಾತ್ರಾ ಮಹಾರಥೋತ್ಸವದ ಉದ್ಘಾಟನೆಗೆ ಮೇಘಾಲಯದ ರಾಜ್ಯಪಾಲರಿಗೆ ಆಹ್ವಾನ

ಕೊಪ್ಪಳದ: ಜನವರಿ 5 ರಂದು ನಡೆಯಲಿರುವ ದಕ್ಷಿಣ ಭಾರತ ಕುಂಬ ಮೇಳ ಎಂದೇ ಪ್ರಖ್ಯಾತಿ ಪಡೆದಿರುವ ಕೊಪ್ಪಳ ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-2026ರ ಮಹಾರಥೋತ್ಸವದ ಉದ್ಘಾಟನೆಗೆ ಮೇಘಾಲಯದ ರಾಜ್ಯಪಾಲರಾದ ವಿಜಯ ಶಂಕರರವರನ್ನು ಶ್ರೀಮಠದ ಪರವಾಗಿ ಕೊಪ್ಪಳದ ವಿದ್ಯಾರ್ಥಿನಿ ದಿಶಾ ಹೆಸರೂರು ಹಾಗೂ ಸಹ ಪಾಠಿಗಳು ಆಹ್ವಾನ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಆಹ್ವಾನಿಸಿದ್ದಾರೆ ಎಂದು ಶ್ರೀ ಗವಿಮಠ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯಪಾಲ ವಿಜಯ ಶಂಕರರವರನ್ನು ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದು, ಅವರಿಂದ ಈ ಬಾರಿ ಮಹಾರಥೋತ್ಸವದ ಉದ್ಘಾಟನೆಯಾಗಲಿದೆ ಎಂಬುದು ವಿಷೇಶ. ರಾಜ್ಯಪಾಲರು ಮತ್ತು ಅವರ ಪತ್ನಿ ಶ್ರೀಮಠದ ಜಾತ್ರಾಮಹೋತ್ಸವದ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





