ಕೊಪ್ಪಳ | ಸಚಿವ ತಂಗಡಗಿ ಅವರ ಬೆಂಗಾವಲು ವಾಹನ ಅಪಘಾತ

ಕೊಪ್ಪಳ /ಗಂಗಾವತಿ: ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ಮಂಗಳವಾರ ರಾತ್ರಿ ಕಾನಹೊಸಳ್ಳಿ ಬಳಿ ನಡೆದಿದೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲಿ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಂಗಾವತಿಯಲ್ಲಿ ಕೆಡಿಪಿ ಸಭೆ ನಡೆಸಿದ ಸಚಿವ ಶಿವರಾಜ ತಂಡಗಿ ಬೆಂಗಳೂರಿನತ್ತ ಹೊರಟಿದ್ದರು. ಈ ವೇಳೆ ಚಿತ್ರದುರ್ಗ ಸಮೀಪದ ಕಾಣಹೊಸಳ್ಳಿ ಬಳಿ ಚಾಲಕ ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆಯ ಗಸ್ತು ವಾಹನದ ಹಿಂದೆ ಸಚಿವ ತಂಗಡಗಿ ಪ್ರಯಾಣಿಸುತ್ತಿದ್ದರು. ಸಚಿವರ ವಾಹನದ ಹಿಂದೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ನಿಗಮದ ವಾಹನ ಬೆಂಗಾವಲಾಗಿತ್ತು ಎನ್ನಲಾಗಿದೆ.
Next Story





