Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕೊಪ್ಪಳ
  4. ಕೊಪ್ಪಳ | ʼಒಳಮೀಸಲಾತಿʼ ಅಲೆಮಾರಿಗಳಿಗೆ...

ಕೊಪ್ಪಳ | ʼಒಳಮೀಸಲಾತಿʼ ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ29 Aug 2025 10:53 PM IST
share
ಕೊಪ್ಪಳ | ʼಒಳಮೀಸಲಾತಿʼ ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಕೊಪ್ಪಳ: ಒಳಮೀಸಲಾತಿಯಲ್ಲಿ ಸ್ಪರ್ಶ ಅಲೆಮಾರಿ ಸಮುದಾಯಗಳ ಜೊತೆ ಸೇರಿಸದೆ ಅಸ್ಪೃಶ್ಯ ಸಮುದಾಯಗಳನ್ನು ಬೇರ್ಪಡಿಸಿ ಶೇ.1ರಷ್ಟು ಮೀಸಲಾತಿ ಅಲೆಮಾರಿಗಳಿಗೆ ಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಎಸ್.ಸಿ. ಎಸ್.ಟಿ.ಅಲೆಮಾರಿ ಮಹಾಸಭಾದ ಜಿಲ್ಲಾ ಘಟಕ ಮತ್ತು ಪರಿಶಿಷ್ಟ ಜಾತಿ 59 ಸೂಕ್ಷ್ಮ ಅತಿ ಸೂಕ್ಷ್ಮ ಅಲೆಮಾರಿಗಳ ಸಮುದಾಯಗಳ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಅಶೋಕ ವೃತ್ತದಿಂದ ಜಿಲ್ಲಾ ಆಡಳಿತ ಭವನದವರೆಗೆ ಅಪಾರ ಸಂಖ್ಯೆಯಲ್ಲಿ ಅಲೆಮಾರಿ ಸಮುದಾಯದವರು ಬೃಹತ್ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್‌ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಒಳ ಮೀಸಲಾತಿ ಏತಕ್ಕೆ ಕೊಡುತ್ತಿದ್ದೀರಿ ಮತ್ತು ಅದರ ಮೂಲ ಸಂವಿಧಾನಾತ್ಮಕ ಚಿಂತನೆ ಏನು ಮತ್ತು ಅದಕ್ಕನುಗುಣವಾದ ಮೀಸಲಾತಿಯನ್ನು ಇಲ್ಲಿ ದಲಿತರಿಂದ ಹಿಡಿದು ಈ ನಾಡಿನ ಅಲೆಮಾರಿಗಳಿಗೆ ತಲುಪಿಸಿದ್ದೀರಾ, ಒಳ ಮೀಸಲಾತಿ ಸಮುದಾಯದ ಗಣತಿ ನಡೆದಾಗ ಇದ್ದಂತ ಮಾನದಂಡ ಕೊನೆಯ ಹಂತದಲ್ಲಿ ಏಕೆ ಬದಲಾಯಿತು, ಯಾವ ಕಾರಣಕ್ಕೆ ಬದಲಾಯಿತು, ಜನ ಪ್ರಜ್ಞಾವಂತರಿದ್ದಾರೆ, ಜೊತೆಗೆ ತಮ್ಮ ಸರಕಾರದ ಪ್ರತಿಯೊಂದು ವಿಚಾರ ಅರಿತವರಿದ್ದಾರೆ. ಇಲ್ಲಿಯವರೆಗೆ ಒಳ್ಳೆಯ ದಕ್ಷ ಆಡಳಿತ ಜನಸಾಮಾನ್ಯರಿಗೆ ಕೊಟ್ಟ ತಾವುಗಳು ಇದ್ದಕ್ಕಿದ್ದ ಹಾಗೆ ತಮ್ಮ ಸಂಪುಟದಲ್ಲಿ ಯಾರೋ ಹೇಳಿದರು ಎಂದು ತಾವುಗಳು ಅಲೆಮಾರಿಗಳ ಅನ್ನದ ತಟ್ಟೆಗೆ ಕೈ ಹಾಕಿದರೆ ನೋಡಿಕೊಂಡು ಇಲ್ಲಿ ಯಾರು ಸುಮ್ಮನಿರಲ್ಲ ಎಂದು ತಿಳಿಸಿದ್ದಾರೆ.

ಇಡೀ ದಲಿತ ಮತ್ತು ಪ್ರಗತಿಪರ ಹಾಗೂ ಸಮಾಜ ಹಿತಚಿಂತಕರು, ಸಾಹಿತಿಗಳು, ಅಂಬೇಡ್ಕರ್ ಅವರ ಆದರ್ಶಗಳಿಗೆ ಗೌರವಕೊಡುವುದರ ಮೂಲಕ ಇವತ್ತು ಎಡಗೈ ಹಾಗೂ ಬಲಗೈ ಸಮುದಾಯಗಳಿಗೂ ಕೂಡಾ ತೃಪ್ತಿಕರ ಮೀಸಲಾತಿ ಕೊಟ್ಟಿಲ್ಲ, ಜೊತೆಗೆ ಅಲೆಮಾರಿಗಳನ್ನು, ಅಸ್ಪೃಶ್ಯತೆ ಯಿಂದ ನೊಂದ ಸಮುದಾಯಗಳನ್ನು ಸ್ಪರ್ಶ್ಯ ಸಮುದಾಯದ ಜೊತೆಗೆ ಸೇರಿಸಿ ಕೊಡುತ್ತಿರುವ ಶೇ.1 ಮೀಸಲಾತಿನೇ ಆಗಲಿ. ಅಸ್ಪೃಶ್ಯರಿಗೆನೇ ಬೇರೆ ಶೇ.1 ಮೀಸಲಾತಿ ಬೇಕು. ಒಂದು ವೇಳೆ ತಾವುಗಳು ಕೊಡದೆ ಹೋದರೆ, ಮುಂದಿನ ರಾಜ್ಯದ ಯಾವುದೇ ಚುನಾವಣೆ ಆಗಿರಲಿ ಸಮಸ್ತ ಅಲೆಮಾರಿಗಳಿಂದ ಚುನಾವಣೆ ಬಹಿಷ್ಕಾರ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೊಪ್ಪಳ ಜಿಲ್ಲೆಯ ಅಲೆಮಾರಿ ಹೋರಾಟಕ್ಕೆ ದಲಿತ ಮತ್ತು ಪ್ರಗತಿಪರ ಮುಖಂಡ ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು, ಬಸವರಾಜ್ ಶೀಲವಂತರ, ಮಹಾಂತೇಶ್ ಕೊತಬಾಳ, ಮುದುಕಪ್ಪ ಹೊಸಮನಿ, ಎಸ್.ಎ.ಗಫಾರ್, ಕಾಶಪ್ಪ ಚಲವಾದಿ, ಮಲ್ಲಿಕಾರ್ಜುನ್ ಪೂಜಾರ್, ಶಿವಪ್ಪ ಹಡಪದ, ರಾಮಲಿoಗಯ್ಯ ಶಾಸ್ತ್ರಿ ಮಠ, ಪಾಸ್ಟರ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ಮಾರ್ಕಂಡೆಯ ಬೆಲ್ಲದ, ಶೇಷಣ್ಣ ಶಹಪುರ್, ಬಸವರಾಜ್ ವಿಭೂತಿ, ಗಾಳೆಪ್ಪ ಮುಂಗೋಲಿ, ಪ್ರಕಾಶ್ ಕಟ್ಟಿಮನಿ, ವಿರೇಶ್ ವಕೀಲರು, ಸೋಮು ಕಲಕೇರಿ, ಕಾಶಿಮ್ ಕುಷ್ಟಗಿ, ಗಣೇಶ್ ಹೋರತಟ್ನಾಳ, ಶಿವಣ್ಣ ಕಲಕೇರಿ, ದ್ಯಾಮಣ್ಣ ಪರಿಯವರ, ವೆಂಕಟೇಶ್ ಗಾದಿ, ಸುಂಕಪ್ಪ ಮೀಸಿ, ಲಲಿತಾ ಮಜ್ಜಿಗಿ, ಮಾರುತಿ ಕಟ್ಟಿಮನಿ, ರಂಗಪ್ಪ ಹಡಗಲಿ, ಅಲೆಮಾರಿ ಬುಡಕಟ್ಟು ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ವಿಭೂತಿ, ಜಿಲ್ಲಾ ಗೌರವ ಅಧ್ಯಕ್ಷ ಶಿವಣ್ಣ ಒಂಟೆತ್ತಿನವರ, ಸುಡುಗಾಡು ಸಿದ್ದರು, ಬುಡುಗ ಜಂಗಮ, ಚೆನ್ನದಾಸರ, ಹೊಲೆಯ ದಾಸರ, ಮಾಲಾದಾಸರ ಶಿಳ್ಳೆಕ್ಯಾತ ಮತ್ತಿತರರು ಉಪಸ್ಥಿತರಿದ್ದರು,

share
ವಾರ್ತಾಭಾರತಿ
ವಾರ್ತಾಭಾರತಿ
Next Story
X