ಕೊಪ್ಪಳ | ಡಾ. ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ

ಕನಕಗಿರಿ: ಕರ್ನಾಟಕ ರತ್ನ, ಪವರ್ ಸ್ಟಾರ್ ದಿವಂಗತ ಡಾ. ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಸೇರಿದಂತೆ ವಿವಿಧೆಡೆ ಗುರುವಾರ ಅಭಿಮಾನಿಗಳು ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪಟ್ಟಣದ ಒಂದನೇ ವಾರ್ಡಿನ ಡಾ. ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಅಪ್ಪು ಅಭಿಮಾನಿ ಬಳಗದ ವತಿಯಿಂದ ಪುನೀತ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೇ ಮಾತನಾಡಿ, ಅಪ್ಪು ಅವರು ಕೇವಲ ನಟರಲ್ಲ, ಮಾನವೀಯತೆಯ ಸಂತ. ಅವರು ಬೆಳ್ಳಿ ಪರದೆಯ ಮೇಲೆ ಮಾತ್ರ ಹೀರೋ ಅಲ್ಲ, ನಿಜ ಜೀವನದಲ್ಲೂ ಹೀರೋ. ಅವರು ಮಾಡಿದ ಸಾವಿರಾರು ನೇತ್ರದಾನ, ಅನಾಥಾಶ್ರಮಗಳಿಗೆ ನೆರವು, ಗೋಶಾಲೆಗಳಿಗೆ ದೇಣಿಗೆ ಇಂದಿಗೂ ನಮ್ಮೆಲ್ಲರಿಗೂ ದಾರಿದೀಪ. ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ, ಅವರ ಆದರ್ಶಗಳು ಅಜರಾಮರ ಎಂದರು.
ಈ ಸಂದರ್ಭದಲ್ಲಿ ಅಭಿಮಾನಿಗಳಾದ ಮಂಜುನಾಥ ಮ್ಯಾಗಡೇ, ಹನುಮೇಶ ಜವಳಗೇರಿ, ತಿಮ್ಮಣ್ಣ ದಾಸರ, ದುರುಗೇಶ ಕೋರಿ, ವಿಜಯ ಇದ್ದರು.
Next Story




