ಕೊಪ್ಪಳ | ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐಯಿಂದ ಪ್ರತಿಭಟನೆ

ಕೊಪ್ಪಳ: ಎರಡು ವರ್ಷಗಳ ಹಿಂದೆ ಕಲ್ಯಾಣ ಕರ್ನಾಟಕ ಭಾಗದ ಪ್ರೌಢಶಾಲೆಗಳಲ್ಲಿ ಪರಿಚಯಿಸಲಾದ NSQF (IT/ITES) ವಿಷಯಕ್ಕೆ ಇದುವರೆಗೆ ಯಾವುದೇ ಶಿಕ್ಷಕರ ನೇಮಕ ಮಾಡದಿರುವುದರಿಂದ ಗಂಗಾವತಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕ್ಷೇತ್ರಶಿಕ್ಷಣಾಧಿಕಾರಿಗಳ ಮುಖಾಂತರ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಿವುಕುಮಾರ್ ಇಚಾನಲ್ ಅನೇಕ ಶಾಲೆಗಳಲ್ಲಿ ಇನ್ನೂ vocational trainer ನೇಮಕವಾಗಿಲ್ಲ, ವಿಧ್ಯಾರ್ಥಿಗಳು ಬೋರ್ಡ್ ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಅರ್ಧ ವಾರ್ಷಿಕ ಪರೀಕ್ಷೆಗಳು ಸಹ ಸನಿಹ ಬಂದಿವೆ ಆದರೂ ಕೂಡ ಸರ್ಕಾರ ಕಣ್ಮುಚ್ಚಿ ಕೂತಿದ್ದು ವಿದ್ಯಾರ್ಥಿಗಳ ಭವಿಷ್ಯವನ್ನು ಆತಂಕ್ಕೆ ದೂಡಿದೆ ಎಂದು ಹೇಳಿದರು.
ವಿಧ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿ ವಿದ್ಯಾಭ್ಯಾಸ ಮುಂದುವರೆಸಬೇಕೆಂದರೆ ವಿದ್ಯಾರ್ಥಿಗಳು ಪಠ್ಯಕ್ರಮವನ್ನು ಸಂಪೂರ್ಣವಾಗಿ ಕಲಿಯುವ ಅವಶ್ಯಕ, ಆದರೆ ಸರ್ಕಾರದ ಈ ನಿರ್ಲಕ್ಷ ದಿಂದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭವಿಷ್ಯದ ಕನಸನ್ನು ಬಿಟ್ಟು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹನುಮೆಶ್ ಮ್ಯಾಗೇಡಿ, ಗಂಗಾವತಿ ತಾಲೂಕು ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷ ಶರೀಫ್ ಎಂ., ರನ್ನ, ಮಂಜುನಾಥ್, ನಟರಾಜ್, ಮನೋಜ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







