ಕೊಪ್ಪಳ | ಸುರೇಶ್ ಬಳೂಟಗಿಗೆ ಅತ್ಯುತ್ತಮ ಕನ್ನಡಿಗ ಪ್ರಶಸ್ತಿ

ಕೊಪ್ಪಳ : ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಕ್ರಿಯಾಶೀಲ ಸಮಾಜಸೇವಕ ಮತ್ತು ಗೋರ್ ಸೇನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ಅವರಿಗೆ ಬೆಂಗಳೂರಿನ ದಿ ನ್ಯೂಸ್ ಹಂಟ್ ಮತ್ತು ಅಂಬಾರಿ ಕ್ರಿಯೆಸೆನ್ಸ್ ವರ್ಷದ ಅತ್ಯುತ್ತಮ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರು ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸುರೇಶ್ ಬಳೂಟಗಿ ಅವರ ಸಮಾಜ ಸೇವೆ ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕಕ್ಕಿಹಳ್ಳಿ ಗ್ರಾಮದ ಪುಟ್ಟ ಹಳ್ಳಿಯ ಸುರೇಶ್ ಬಳೂಟಗಿ ಅವರು ನಾಡಿನ ಹತ್ತು ಹಲವು ಕಡೆ ವಿವಿಧ ರೀತಿಯಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಬಂಜಾರ ಸಮಾಜದ ಗೋರ್ ಸೇನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ತಾಂಡಾ ಅಭಿವೃದ್ಧಿ ಮತ್ತು ಕಂದಾಯ ಗ್ರಾಮಗಳ ಹೋರಾಟ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಜಾಗೃತಿಗೆ ಸುರೇಶ್ ಬಳೂಟಗಿ ಮುಂಚೂಣಿಯಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.
ಇವರ ಸಮಾಜ ಸೇವೆ ಗುರುತಿಸಿ ಬೆಂಗಳೂರು ಅಂಬಾರಿ ಕ್ರಿಯೆಸೆನ್ಸ್ ಮತ್ತು ನ್ಯೂಸ್ ಹಂಟ್ ವರ್ಷದ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ.





