ಕುಕನೂರು | ವೃದ್ಧನ ಮೇಲೆ ಕರಡಿ ದಾಳಿ; ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ PC: freepik
ಕುಕನೂರು: ತಾಲೂಕಿನ ರಾವಣಕಿ ಮೊರಾರ್ಜಿ ಶಾಲೆಯ ಹತ್ತಿರ ವೃದ್ದರೊಬ್ಬರ ಮೇಲೆ ಮೂರು ಕರಡಿಗಳು ದಾಳಿ ನಡೆಸಿ ತೀವ್ರವಾಗಿ ಗಾಯ ಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.
ನಾಗಪ್ಪ ಬೆಂಚ್ಚಳ್ಳಿ ರಾವಣಕಿ (60) ಎಂಬ ವ್ಯಕ್ತಿ ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಕಳೆ ತಗೆಯುವ ಸಮಯದಲ್ಲಿ ಹಿಂದಿನಿಂದ ಬಂದು ಕರಡಿಗಳು ದಾಳಿ ನಡೆಸಿವೆ ಎನ್ನಲಾಗಿವೆ.
ಈ ವೇಳೆ ನಾಗಪ್ಪ ಬೆಂಚ್ಚಳ್ಳಿ ದೊಣ್ಣೆಯಿಂದ ಹೊಡೆಯಲು ಮುಂದಾದರೂ ಕರಡಿಗಳು ಮೇಲರಗಿ ತೀವ್ರವಾಗಿ ಗಾಯಗೊಳಿಸಿವೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕರೆದೊಯ್ಯಲಾಯಿತು.
Next Story





