ಕುಕನೂರು | ಕಾಯಕ ಗ್ರಾಮ ಯೋಜನೆ ಮೂಲಕ ಸಮಗ್ರ ಅಭಿವೃದ್ಧಿ : ಬಿರಾದಾರ್

ಕುಕನೂರು : ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಕಾಯಕ ಗ್ರಾಮ ಯೋಜನೆಯು ಒಂದು ಮಾದರಿ ಕ್ರಮವಾಗಿದ್ದು, ಅಧಿಕಾರಿಗಳಿಂದ ದತ್ತು ಗ್ರಾಮ ಯೋಜನೆಯಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಪಾಟೀಲ್ ಬಿರಾದಾರ್ ತಿಳಿಸಿದರು.
ಯರೇಹಂಚಿನಾಳ ಗ್ರಾಮದಲ್ಲಿ ಕಾಯಕ ಗ್ರಾಮ ಯೋಜನಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಯಕ ಗ್ರಾಮ ಯೋಜನೆಯಿಂದ ಗ್ರಾಮ ಪಂಚಾಯತಿಯ ರೂಪರೇಷೆಗಳು ಮತ್ತು ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನ ಮಾಡುವುದು. ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಯೋಜನೆ, ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ ಕೂಸಿನ ಮನೆ, ಅರಿವು ಕೇಂದ್ರ ಸೇರಿದಂತೆ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಯೋಜನೆಯನ್ನು ಸರಿಯಾಗಿ ಕ್ರಮದ ರೀತಿಯಲ್ಲಿ ಮಾಡಬೇಕು ಮತ್ತು ಕಾಲಮಿತಿಯಲ್ಲಿ ಮಾಡಬೇಕು. ಅದಕ್ಕಾಗಿ ಗ್ರಾಮ ಪಂಚಾಯತ್ ಹಂತದಲ್ಲಿ ತಂಡವನ್ನು, ರಚಿಸಿ ಅದರ ಮೂಲಕ ಯಾವ ಯೋಜನೆ ಯಾವ ಕಾಲದಲ್ಲಿ ಆಗಬೇಕು ಎಂದು ಪರಿಶೀಲನೆ ಮಾಡಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜ್ಯೋತಿ, ಬಸಲಿಂಗಪ್ಪ ಹಂಚಿನಾಳ, ಪಂಚಾಯತ್ ಬಿಲ್ ಕಲೆಕ್ಟರ್, ಸಿಬ್ಬಂದಿಗಳು ಹಾಜರಿದ್ದರು.





