ಕುಕನೂರು | ಪ್ರೇಮ ವಿವಾಹವಾದ ದಂಪತಿಗೆ ಜೀವ ಬೆದರಿಕೆ : ಆರೋಪ

ಕುಕನೂರು : ತಾಲೂಕಿನ ತಳಕಲ ಗ್ರಾಮದ ಬಸವರಾಜ್ ಮೇಟಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ನನ್ನ ತಂದೆ ಹಾಗೂ ಕೆಲವರಿಂದ ಜೀವ ಬೆದರಿಕೆ ಇದೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ಚಿನ್ಮಯಿ ವೈದ್ಯ ಎಂಬವರು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರಿಗೆ ನೀಡಿದ ಮನವಿಯಲ್ಲಿ, ಇದೇ ಜ.14ರಂದು ಹುಬ್ಬಳ್ಳಿಯ ಒಂಟಿ ಆಂಜನೇಯ ದೇವಸ್ಥಾನದಲ್ಲಿ ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ. ಬಳಿಕ ಫೆ.23ರಂದು ಯಲಬುರ್ಗಾ ಪಟ್ಟಣದ ವಿವಾಹ ನೋಂದಣಿ ಕಚೇರಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದೇವೆ. ರೆಡ್ಡಿ ಸಮುದಾಯದ ಬಸವರಾಜನನ್ನು ಪ್ರೀತಿ ಮಾಡುತ್ತಿರುವ ವಿಚಾರ ಮನೆಯವರಿಗೆ ಗೊತ್ತಿತ್ತು. ಈ ಮದುವೆಯಾದ ವಿಚಾರ ಗೊತ್ತಾದರೆ ಬ್ರಾಹ್ಮಣ ಸಮುದಾಯದ ನನ್ನ ತಂದೆಯಿಂದ ಹಲ್ಲೆ ಅಥವಾ ಜೀವ ಬೆದರಿಕೆ ಭಯವಿದೆ ಎಂದು ಚಿನ್ಮಯಿ ಆರೋಪಿಸಿದ್ದಾರೆ.
ಈ ಕುರಿತು ವಕೀಲ ಸುರೇಶ್ ಗುಡದೂರು ಮಾಹಿತಿ ನೀಡಿ, ದಂಪತಿಗಳ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Next Story




