ಕುಕನೂರು | ಜಾತ್ರಾ ಮಹೋತ್ಸವದ ಅಂಗವಾಗಿ 21 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಕುಕನೂರು : ತಾಲೂಕಿನ ಕುದುರೆಮೋತಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ 21 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ ಮಹಾಂತ ಮಹಾಸ್ವಾಮಿ ಅವರು, ಪರಸ್ಪರ ಸೌಹಾರ್ದ, ಸಹಿಷ್ಣುತೆ ಮತ್ತು ಹೊಂದಾಣಿಕೆಯಿಂದ ಬದುಕುವುದೇ ನಿಜವಾದ ಭಾವೈಕ್ಯತೆ ಎಂದು ಹೇಳಿದರು.
ಜಾತಿ-ಧರ್ಮ ಬೇಧವಿಲ್ಲದೆ ಗ್ರಾಮದಲ್ಲಿ ಎಲ್ಲರೂ ಸಹೋದರತ್ವದಿಂದ ಜೀವನ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಸದಸ್ಯ ಈರಪ್ಪ ಕುಡುಗುಂಟಿ ಮಾತನಾಡಿ, ವೀರಶೈವ ಮಠಗಳು ಸಮಾಜದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಕಾಪಾಳಿಗಳು. ಅವುಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಳಕಪ್ಪ ಕಂಬಳಿ ಅವರು, ದಾಂಪತ್ಯದಲ್ಲಿ ಸಮಾನತೆ ಮತ್ತು ಹೊಂದಾಣಿಕೆ ಮುಖ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಹಾದೇವ ಮಹಾಸ್ವಾಮಿಗಳು, ಬಸವಲಿಂಗ ಶಿವಾಚಾರ್ಯರು, ಗುರು ಸಿದ್ದೇಶ್ವರ ಶಿವಾಚಾರ್ಯರು, ಗುರು ಶಾಂತವೀರ ಶಿವಾಚಾರ್ಯರು ಹಾಗೂ ಹಜರತ್ ನಿಜಾಮುದ್ದೀನ್ ದರ್ಗಾದ ಅಶ್ರಫ್ ಗುರುಗಳು ದಿವ್ಯ ಸಾನಿಧ್ಯವಹಿಸಿದ್ದರು.
ಶ್ರೀನಾಥ ರೆಡ್ಡಿ, ಮಲ್ಲನಗೌಡ ಕೋನನಗೌಡ್ರು, ಅಶೋಕ ತೋಟದ, ಬಸವರಾಜ ರಾಜೂರ, ಅಯ್ಯನಗೌಡ ಕೆಂಚಮ್ಮನವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






