ಕುಕನೂರು | ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಗೊಬ್ಬರ ಬಳಸಿ : ರುದ್ರೇಶಪ್ಪ

ಕುಕನೂರು : ರೈತರು ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಗೊಬ್ಬರ ಬಳಸಿ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಕೊಪ್ಪಳ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಸಲಹೆ ನೀಡಿದ್ದಾರೆ.
ತಾಲೂಕಿನ ಮಂಗಳೂರು ಗ್ರಾಮದಲ್ಲಿ ರೈತರಿಗೆ ನ್ಯಾನೋ ಯೂರಿಯಾ ಗೊಬ್ಬರವನ್ನು ಡ್ರೋನ್ ಮೂಲಕ ಬಳಸುವ ಪ್ರಾತ್ಯಕ್ಷೀಕ ಮಾಹಿತಿಯನ್ನು ನೀಡಿ ಅವರು ಮಾತನಾಡಿದರು.
ವಿದೇಶಿ ಉತ್ಪನ್ನವಾದ ಯೂರಿಯಾ ಗೊಬ್ಬರ ಬಳಕೆಗೆ ಪರ್ಯಾಯವಾಗಿ ರೈತರು ನ್ಯಾನೋ ಯೂರಿಯಾ ಗೊಬ್ಬರ ಬಳಸಲು ಮುಂದಾಗಿ, ವಿಶೇಷವಾಗಿ ಮೆಕ್ಕೆಜೋಳ ಬೆಳೆಗಳಿಗೆ ರೈತರು ಡ್ರೋನ್ ತಂತ್ರಜ್ಞಾನದ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ ಮಾಡಿದರೆ ಇನ್ನೂ ಉಳಿತಾಯ ಆಗಲಿದೆ. ಕರ್ನಾಟಕ ಸರ್ಕಾರ ಇಫ್ಕೊ ಕಂಪನಿ ಜೊತೆ ಸೇರಿ ನ್ಯಾನೋ ಯೂರಿಯಾ ಗೊಬ್ಬರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ 1 ಲಕ್ಷ 20 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ರೈತರು ನ್ಯಾನೋ ಯೂರಿಯಾ ಗೊಬ್ಬರ ಬಳಸಿ ಲಾಭ ಮಾಡಿಕೊಳ್ಳಿ, ನ್ಯಾನೋ ಯೂರಿಯಾ ಡ್ರೋನ್ ಮೂಲಕ ಸಿಂಪಡಣೆ ಮಾಡಲು ಜಿಲ್ಲೆಯಲ್ಲಿ ಇದುವರೆಗೂ 12 ಡ್ರೋನ್ ಗಳನ್ನು ಸೊಸೈಟಿ ಗಳಿಗೆ ಕೊಡಲಾಗಿದ್ದು, ರೈತರು ಇದರ ಪ್ರಯೋಜನ ಪಡೆಯಿರಿ ಎಂದು ಹೇಳಿದರು.
ಯಲಬುರ್ಗಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ಡಂಬಳ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ನಿಂಗಪ್ಪಹಿರೇಹಾಳ, ಇಫ್ಕೊ ಕಂಪನಿ ಪ್ರತಿನಿಧಿ ರಾಘವೇಂದ್ರ, ಸ್ಥಳೀಯ ಕೃಷಿ ಸಹಕಾರ ಸಂದ ಅಧ್ಯಕ್ಷ ಶರಣಪ್ಪ ಹ್ಯಾಟಿ, ಉಪಾಧ್ಯಕ್ಷ ರಾಮಣ್ಣ ಮ್ಯಾಗ ಳಶಿ, ಇತರರು ಉಪಸ್ಥಿತರಿದ್ದರು.





