ಕುಕನೂರು | ಅಂತರ್ಜಾತಿ ವಿವಾಹ ಹಿನ್ನೆಲೆ ಗಲಾಟೆ: ಓರ್ವನಿಗೆ ಗಂಭೀರ ಗಾಯ

ಕುಕನೂರು: ಅಂತರ್ಜಾತಿ ವಿವಾಹದ ಹಿನ್ನೆಲೆ ಗಲಾಟೆ ಸಂಭವಿಸಿ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾದ ಘಟನೆ ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೇರಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಬಳಗೇರಿ ಗ್ರಾಮದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ ಹಾಗೂ ಬಾರಕೇರ ಸಮುದಾಯಕ್ಕೆ ಸೇರಿದ ಯುವತಿ ಪರಸ್ಪರ ಪ್ರೀತಿಸಿ ಮೂರ್ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದರು. ಈ ಮದುವೆಯ ವಿಷಯ ತಿಳಿದ ಗದಗ ಜಿಲ್ಲೆಯ ರೋಣ ತಾಲೂಕಿನ ಶಾಂತಿಗಿರಿ–ಇಟಗಿ ಗ್ರಾಮದಲ್ಲಿರುವ ಯುವತಿಯ ಸಂಬಂಧಿಕರು ಬಳಗೇರಿ ಗ್ರಾಮಕ್ಕೆ ಬಂದು ಗಲಾಟೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಬಳಗೇರಿ ಗ್ರಾಮದ ಗ್ಯಾರೇಜ್ ಸಮೀಪ ನಡೆದ ಜಗಳದಲ್ಲಿ ಯುವಕನ ಸ್ನೇಹಿತನ ತಂದೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಕನೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕುಕನೂರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
Next Story





