Kuknoor | ರಸ್ತೆ ದಾಟುತ್ತಿದ್ದ ಮಹಿಳೆಗೆ ಕ್ರೂಸರ್ ಢಿಕ್ಕಿ : ಗಂಭೀರ ಗಾಯ

ಕುಕನೂರು: ತಾಲೂಕಿನ ನಿಟ್ಟಾಲಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಗುರುವಾರ ರಾತ್ರಿ ಕ್ರೂಸರ್ ವಾಹನ ಢಿಕ್ಕಿ ಹೊಡೆದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿಟ್ಟಾಲಿ ಗ್ರಾಮದ ಬಸಮ್ಮ ಮಹದೇವಪ್ಪ ಹಿರೇಮಠ (45) ಗಾಯಗೊಂಡವರು.
ಬಸಮ್ಮ ಅವರು ಕುಕನೂರಿನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಪ್ರಯಾಣಿಸಿ ನಿಟ್ಟಾಲಿ ಕ್ರಾಸ್ನಲ್ಲಿ ಇಳಿದು ರಸ್ತೆ ದಾಟುತ್ತಿದ್ದ ವೇಳೆ, ಕುಕನೂರು ಕಡೆಯಿಂದ ಬಂದ ಕ್ರೂಸರ್ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಬಸಮ್ಮ ಅವರನ್ನು ತಕ್ಷಣ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ಕ್ರೂಸರ್ ವಾಹನವು ಕೊಪ್ಪಳದ ಭಾಗ್ಯನಗರಕ್ಕೆ ಸೇರಿದ್ದು, ಅದರ ನೋಂದಣಿ ಸಂಖ್ಯೆ ಕೆಎ-35-ಬಿ-0638 ಎಂದು ತಿಳಿದುಬಂದಿದೆ.
ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story




