ಕುಷ್ಟಗಿ ತಾಲೂಕು ಬಂಜಾರ ಸಮಾಜದ ಚಿಂತನಾ ಸಭೆ

ಕುಷ್ಟಗಿ: ಕುಷ್ಟಗಿ ತಾಲೂಕು ಬಂಜಾರ ಸಮಾಜದ ಚಿಂತನಾ ಸಭೆಯು ಇಂದು ನಡೆಯಿತು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಆಶ್ರಯದಲ್ಲಿ ಕುಷ್ಟಗಿ ತಾಲೂಕು ಬಂಜಾರ ಸಮಾಜದ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು.
ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷರಾಗಿ ರಾಗಿ ಪಾಂಡುರಂಗ ಲಮಾಣಿ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುತ್ತು ರಾಠೋಡ, ಉಪಾಧ್ಯಕ್ಷರಾಗಿ ಉಮೇಶ ರಾಠೋಡ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ ಹಾಗೂ ಖಜಾಂಚಿಯಾಗಿ ಭದ್ರಪ್ಪ ಪವಾರ್, ಸಂಘದ ಕಾನೂನು ಸಲಹಾ ಹಾಗೂ ಹೋರಾಟಗಾರರಾಗಿ ಹೆಚ್.ಆರ್. ನಾಯ್ಕ್ ಮತ್ತು ಮಾಂತೇಶ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಚಿಂತನಾ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಲಕ್ಷಣ ನಾಯ್ಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರಕಾಶ ರಾಠೋಡ, ವಿಜಯ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಚವ್ಹಾಣ, ಛತ್ರಪ್ಪ ರಾಠೋಡ, ನೀಲಪ್ಪ ತೋನಸಿಹಾಳ, ಪಂಪಣ್ಣ ಬೋದುರ, ಬುಡ್ಡಪ್ಪ ಹುಲಿಯಾಪೂರ, ಶಿವಪ್ಪ ಮಾವಿನ ಇಟಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದಲ್ಲದೆ ಕುಷ್ಟಗಿ ತಾಲೂಕಿನ ವಿವಿಧ ತಾಂಡಾಗಳ ನಾಯಕರು, ಡಾವ ಕಾರಬಾರಿಗಳು, ಯುವ ಮುಖಂಡರು ಹಾಗೂ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘಟನೆಯ ಬಲವರ್ಧನೆಗೆ ಸಹಕಾರ ನೀಡಿದರು.







