ಮುನಿಸು ಮರೆತು ಒಂದಾದ ರಾಜಕೀಯ ವಿರೋಧಿಗಳು: ಶಿವರಾಜ್ ತಂಗಡಗಿ - ದಡೇಸೂಗೂರು ಆತ್ಮೀಯ ಭೇಟಿ

ಕೊಪ್ಪಳ : ರಾಜಕೀಯವಾಗಿ ಪರಸ್ಪರ ವಿರೋಧಿಗಳಾಗಿದ್ದ ಸಚಿವ ಶಿವರಾಜ್ ತಂಗಡಗಿ ಹಾಗೂ ಮಾಜಿ ಶಾಸಕ ಬಸವರಾಜ ದಡೇಸೂಗೂರು ಆತ್ಮೀಯವಾಗಿ ಭೇಟಿಯಾಗಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಅವರು ತಮ್ಮ ಪುತ್ರ ಶಶಾಂಕ್ ಅವರ ವಿವಾಹದ ಆಮಂತ್ರಣ ನೀಡಲು ಕಾರಟಗಿಯ ಬಿಜೆಪಿ ಕಚೇರಿಗೆ ಸ್ವತಃ ತೆರಳಿದ್ದಾರೆ. ಈ ವೇಳೆ ಮಾಜಿ ಶಾಸಕ ದಡೇಸೂಗೂರು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದ್ದಾರೆ.
ವರ್ಷಗಳ ಮುನಿಸು ಮರೆತು ಇಬ್ಬರೂ ನಾಯಕರು ಪರಸ್ಪರ ಕೈಕುಲುಕಿ, ಉಭಯ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಡಿಸೆಂಬರ್ 3ರಂದು ನಡೆಯಲಿರುವ ಪುತ್ರನ ವಿವಾಹಕ್ಕೆ ಸಚಿವರು ಖುದ್ದಾಗಿ ಆಹ್ವಾನ ನೀಡಿದ್ದಾರೆ.
Next Story




