RSS ನೋಂದಣಿ ಆಗಲೇಬೇಕು, ಇಲ್ಲ ಅಂದರೆ ಬಿಡಲ್ಲ : ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ : ʼRSS ನೋಂದಣಿ ಆಗಲೇಬೇಕು, ಇಲ್ಲ ಅಂದ್ರೆ ನಾವು ಬಿಡೋದಿಲ್ಲ. ಬೆಂಗಳೂರು ವ್ಯಾಪ್ತಿಯಲ್ಲಿ ಒಂದು ನಾಯಿ ಸಾಕ ಬೇಕು ಅಂದರೂ ನೋಂದಣಿಯಾಗಬೇಕು. ಅಂತಹದರಲ್ಲಿ ಇವರನ್ನು ಬಿಡೋದಿಲ್ಲʼ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಒಂದು ಅಂಗಡಿ ಮಾಡಬೇಕು ಅಂದರೂ ನೋಂದಣಿ ಆಗಬೇಕು. ಸಣ್ಣ ಪಾನ್ ಶಾಪ್ ಗೂ ನೋಂದಣಿ ಬೇಕು. ಹೀಗಿರುವಾಗ ಇವರು ಯಾಕೆ ನೋಂದಣಿ ಮಾಡಿಕೊಳ್ಳುವುದಿಲ್ಲ?ʼ ಎಂದು ಪ್ರಶ್ನಿಸಿದರು.
ʼಅವರಿಗೆ ಭಯ ಇದೆ. ಬೇರೆ ಬೇರೆ ಕಡೆಯಿಂದ ದುಡ್ಡು ಬರುತ್ತಿದೆ. ನೋಂದಣಿಯಾದರೆ ಅದರ ಲೆಕ್ಕ ಕೊಡಬೇಕಾಗುತ್ತದೆ ಎನ್ನುವ ಕಾರಣದಿಂದ ಅವರು ನೋಂದಣಿ ಮಾಡಿಸಿಕೊಳ್ಳುತ್ತಿಲ್ಲʼ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Next Story




