ಮುಸಲಾಪೂರ : ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ

ಕನಕಗಿರಿ : ಸಮೀಪದ ಮುಸಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡನೇಯ ವಾರ್ಡ್ ಸೇರಿದಂತೆ ಕೆಲ ವಾರ್ಡ್ ಗಳಿಗೆ ಕುಡಿಯುವ ನೀರು ಪೊರೈಕೆ ಮಾಡುತ್ತಿಲ್ಲ ಎಂದು ದೂರಿ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಪಂಚಾಯತ್ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಯುವ ಮುಂದಾಳು ರಂಗನಾಥ ಮಾತನಾಡಿ, ಮುಸಲಾಪುರ ಗ್ರಾಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ, ದಿನದಿಂದ ದಿನಕ್ಕೆ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದು, ತಾಲ್ಲೂಕಿನಲ್ಲಿ ದೊಡ್ಡ ಗ್ರಾಮಗಳಲ್ಲಿ ಒಂದಾಗಿದೆ ಆದರೆ ಇಲ್ಲಿ ಸೌಲಭ್ಯ -ಗಳು ಕಡಿಮೆ ಇವೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಕೇಂದ್ರ ಸ್ಥಾನವಾಗಿದ್ದರೂ, ಗ್ರಾಮದ ಜನರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುತ್ತಿಲ್ಲ, ಸೋಮವಾರದಿಂದ ಗ್ರಾಮದಲ್ಲಿ ಜಾತ್ರೆ ಆರಂಭವಾಗಿದ್ದು, ಬಂದ ಜನರಿಗೆ ನೀರು ಸಿಗುತ್ತಿಲ್ಲ ಎಂದು ತಿಳಿಸಿದರು.
ಸಮರ್ಪಕವಾಗಿ ನೀರು ಪೊರೈಕೆ ಮಾಡದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಶಿಧರ ಕೊಳಜಿ, ಚೆನ್ನಪ್ಪ ಬೊಮ್ಮನಾಳ, ಬಸನಗೌಡ ಮಾಲಿ ಪಾಟೀಲ, ಬಸಪ್ಪ ಹುಸಾಗಲಿ, ಮತ್ತು ಯುವಕರು ಊರಿನ ಮಹಿಳೆಯರು ಯುವತಿಯವರು ಇದ್ದರು.







