ಅ.13ರಂದು ಕುಕನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಕುಕನೂರ: 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಅ.13ರಂದು ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕುಕನೂರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳು :
ಕುಕನೂರ, ಗುದ್ದೇಪ್ಪನಮಠ, ಕಕ್ಕಿಹಳ್ಳಿ, ಕೋನಾಪುರ, ಬಳಗೇರಿ, ಯಡಿಯಾಪುರ, ಬೆದವಟ್ಟಿ, ಗಾವರಾಳ, ರಾಜೂರು, ಆಡೂರು, ಕಲ್ಲೂರು, ದ್ಯಾಂಪುರ, ಇಟಗಿ, ಮಂಡಲಗೇರಿ, ಬಿನ್ನಾಳ, ಯರೇಹಂಚಿನಾಳ, ಸೋಂಪುರ, ಚಿಕ್ಕನಕೊಪ್ಪ, ಮನ್ನಾಪುರ, ನಿಂಗಾಪುರ ಹಾಗೂ ಸಿದ್ನೇಕೊಪ್ಪ.
ನಿರ್ವಹಣಾ ಕಾಮಗಾರಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡರೆ ವಿದ್ಯುತ್ ಪೂರೈಕೆಯನ್ನು ಮೊದಲೇ ಪುನರಾರಂಭಿಸಲಾಗುವುದು ಎಂದು ಜೆಸ್ಕಾಂನ ಕುಕನೂರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story




