ಸಂವಿಧಾನವು ನಮ್ಮ ದೇಶದ ಆತ್ಮವಿದ್ದಂತೆ: ಶಿವರಾಜ ಗುರಿಕಾರ್

ಗಂಗಾವತಿ: ನಗರದ ಶ್ರೀ ಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಬುಧವಾರ ಆಚರಿಸಲಾಯಿತು.
ಈ ವೇಳೆ ಪ್ರಭಾರ ಪ್ರಾಂಶುಪಾಲ ಶಿವರಾಜ ಗುರಿಕಾರ್ ಮಾತನಾಡಿ, ಸಂವಿಧಾನವು ನಮ್ಮ ದೇಶದ ಆತ್ಮವಿದ್ದಂತೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ರಾಷ್ಟ್ರದಲ್ಲಿ ಸಂವಿಧಾನವು ಜನಸಾಮಾನ್ಯರಲ್ಲಿ ಭಾತೃತ್ವ ಭಾವನೆಯನ್ನು ಮೂಡಿಸುತ್ತದೆ ಎಂದರು.
ಸಂವಿಧಾನ ದಿನದ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.
ಪ್ರಾಧ್ಯಪಕ ಡಾ.ಮಮ್ತಾಜ್ ಬೇಗಂ, ಮಂಜುನಾಥ ಬಳ್ಳಾಪುರು, ಅಣ್ಣೋಜಿ ರೆಡ್ಡಿ, ರವಿಕುಮಾರ್, ಉಪನ್ಯಾಸಕ ಚೆನ್ನಬಸಪ್ಪ, ತಾಯಪ್ಪ ಮರ್ಚಡ್, ಪಂಚಾಕ್ಷರಯ್ಯ, ಸೋಮಶೇಖರ, ಶಿವುಕುಮಾರ್ ಇತರರು ಇದ್ದರು.
Next Story





