ಯೂರಿಯಾ ಗೊಬ್ಬರದ ಕೊರತೆಯಿಲ್ಲ, ರೈತರು ಆತಂಕ ಪಡಬೇಡಿ : ಕೃಷಿ ಇಲಾಖೆ

ಕೊಪ್ಪಳ/ ಕುಕನೂರು: ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಇಲ್ಲವೇ ಇಲ್ಲ, ರೈತರು ಆತಂಕ ಪಡಬೇಡಿ, ಎಲ್ಲರಿಗೂ ಸಮರ್ಪಕ ವಿತರಣೆ ನಡೆಯುತ್ತಿದೆ ಎಂದು ಯಲಬುರ್ಗಾ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ತುಂಬಳ್ ರೈತರಿಗೆ ತಿಳಿಸಿದ್ದಾರೆ.
ಕುಕನೂರ್ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾತೃ ಎಜೇನ್ಸಿ ಮತ್ತು ಆನಂದ್ ಎಜೇನ್ಸಿ ಯಿಂದ ಕೃಷಿ ಇಲಾಖೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಗೊಬ್ಬರ ವಿತರಣೆಯನ್ನು ಪರಿಶೀಲಿಸಿ ಸಹಾಯಕ ನಿರ್ದೇಶಕ ಪ್ರಮೋದ್ ತುಂಬಳ್ ಮಾತನಾಡಿ ಈಗಾಗಲೇ ಕುಕನೂರು ತಾಲೂಕಿಗೆ 20 ಟನ್ ಯೂರಿಯಾ ಗೊಬ್ಬರ ಬಂದಿದೆ. ತಾಲೂಕಿಗೆ 4800 ಮೆಟ್ರಿಕ್ ಟನ್ ಬೇಡಿಕೆಯಿದ್ದು ಅದರಲ್ಲಿ 2800 ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಇನ್ನೂ ಮತ್ತಷ್ಟು ಗೊಬ್ಬರ ಬರಲಿದ್ದು ರೈತರು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಕೃಷಿ A.D ಪ್ರಮೋದ್ ತುಂಬಳ್ ತಿಳಿಸಿದ್ದಾರೆ.
ಅವಳಿ ತಾಲೂಕಿನ ಬೇವೂರು, ವಂಕಲಕುಂಟಾ, ಮಂಗಳೂರು, ಕುಕನೂರು ಎಲ್ಲಾ ಕಡೆ ಗೊಬ್ಬರ ಲಭ್ಯವಿದ್ದು ರೈತರು ತಮ್ಮ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿಸಿ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.





