ಟಿಪ್ಪು ಸುಲ್ತಾನ್ ಅಪ್ರತಿಮ ಹೋರಾಟಗಾರ: ಹೊನ್ನೂರುಸಾಬ

ಕನಕಗಿರಿ: ಮೈಸೂರು ಹುಲಿ ಎಂದು ಖ್ಯಾತಿ ಗಳಿಸಿದ್ದ ಟಿಪ್ಪು ಸುಲ್ತಾನರು ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನೂರುಸಾಬ ತಿಳಿಸಿದರು.
ಇಲ್ಲಿನ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಯುವಕ ಸಂಘ ಗುರುವಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನರು ಅಪ್ರತಿಮ ದೇಶಪ್ರೇಮಿಯಾಗಿದ್ದರು, ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ತಮ್ಮ ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಮಾಡಿದ್ದರು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಭಜಂತ್ರಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮು ಆಗೋಲಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಹರತ್ ಹುಸೇನ, ಸದಸ್ಯ ನೀಲಕಂಠ ಬಡಿಗೇರ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯ ಹನುಮಂತಪ್ಪ ಬಸರಿಗಿಡದ, ನಾಮ ನಿರ್ದೇಶಕ ಶಾಂತಪ್ಪ ಬಸರಿಗಿಡದ, ನಗರ ಆಶ್ರಯ ಸಮಿತಿ ಸದಸ್ಯ ಕನಕಪ್ಪ ಮ್ಯಾಗಡೆ, ಪ್ರಮುಖರಾದ ಖಾಜಸಾಬ ಅಗರಬತ್ತಿ, ಮುಕ್ತಮ್ ಚಳ್ಳಮರದ, ಸೈಯದ ಸುಭಾನ, ಬುಡನ್ ಹಣಗಿ, ಮುರ್ತುಜಾ, ಮುನ್ನಾ, ಮಹ್ಮದ, ಹೊನ್ನೂರುಸಾಬ ಬಂಕಾಪುರ, ಎಸ್‌ಡಿಪಿಐ ನಗರ ಸಮಿತಿ ಅಧ್ಯಕ್ಷ ಅಲ್ಲಾಭಕ್ಷಿ, ಉಪಾಧ್ಯಕ್ಷ ಕಲಂದರ್ ಹಣಗಿ, ಕಾರ್ಯದರ್ಶಿ ರಿಯಾಜ್ , ಕೋಶಾಧಿಕಾರಿ ಹಾಫಿಜ್ ಫಾರೂಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







