ನೋವುಗಳನ್ನು ಮೀರಿ ಬೆಳೆದವರು ದಿ. ಎಸ್.ಎಲ್. ಭೈರಪ್ಪ: ಡಾ. ವಿ.ಬಿ ಬಡಿಗೇರ್

ಕೊಪ್ಪಳ: ಜೀವನದ ಎಲ್ಲಾ ನೋವುಗಳನ್ನು ಮೀರಿ ಬೆಳೆದವರು ದಿ. ಪ್ರೊ ಎಸ್. ಎಲ್. ಭೈರಪ್ಪನವರು. ಅವರ ಬದುಕು ಹಾಸಿಗೆ ಆಗಿರಲಿಲ್ಲ ಮುಳ್ಳಿನ ಹಾಸಿಗೆಯಾಗಿತ್ತು. ಅದನ್ನು ಮೀರಿ ಬಡತನವನ್ನು ಬಂಡವಾಳವಾಹಿಸಿಕೊಂಡು ಜೀವನಾನುಭವ ಮತ್ತು ಓದಿನ ಮೂಲಕ ನಾಡಿನ ಶ್ರೇಷ್ಠ ಕಾದಂಬರಿಕಾರಾದರು ಎಂದು ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಸಾಹಿತಿಗಳಾದ ಡಾ. ವಿ.ಬಿ ಬಡಿಗೇರ್ ಅವರು ಹೇಳಿದರು.
ನಗರ ಶ್ರಿ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಹಮ್ಮಿಕೊಂಡ ಹಿರಿಯ ಸಾಹಿತಿ, ನಾಡೋಜ, ಪದ್ಮಭೂಷಣ ದಿ. ಪ್ರೊ ಎಸ್ ಎಲ್ ಭೈರಪ್ಪನವರಿಗೆ ನುಡಿ ನಮನ ಹಾಗೂ ಅವರ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಭಾಗಿಯಾಗಿ ನುಡಿ ನಮನವನ್ನು ಸಲ್ಲಿಸಿ, ಮಾತನಾಡಿಸಿದ ಅವರು, ಭೈರಪ್ಪನವರು ಜೀವನದ ಜೊತೆಗೆ ಗ್ರಂಥಾಲಯವನ್ನು ಪ್ರೀತಿಸಿದವರು. ಮನೆಯಲ್ಲಿನ ಬಡತನವನ್ನು ಬಂಡವಾಳವಾಗಿಸಿಕೊಂಡು ಶಿಕ್ಷಣ ಪಡೆದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ಅವರು ತಮ್ಮ ಕಾದಂಬರಿಗಳಲ್ಲಿ ಓದುಗರ ಮನಸ್ಸನ್ನು ಸಳೆಯುವ ಅನುಪಮ ಕಥನ ತಂತ್ರಗಾರಿಕೆಯನ್ನು ಬಳಸಿಕೊಂಡು ಬರೆದು, ಓದುಗರ ಮೆಚ್ಚುಗೆಗೆ ಪಾತ್ರರಾದರು. ತತ್ವಜ್ಞಾನಿಗಳಾಗಿ, ಕಾದಂಬರಕಾರರಾಗಿ, ಸಾರಸ್ವತ ಲೋಕದಲ್ಲಿ ಚಿರಸ್ಮರಣೀಯರಾಗಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ. ಚನ್ನಬಸವ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ದಂಡೋತಿ ಪ್ರಾಧ್ಯಾಪಕರಾದ ಡಾ. ಸುಂದರ್ ಮೇಟಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ ಸುಮಲತಾ ಬಿ. ಎಂ. ಸ್ವಾಗತಿಸಿದರು, ಡಾ. ಶಿವಪ್ಪ ಜಮಾಪುರ ನಿರೂಪಣೆ ಮಾಡಿದರು, ಡಾ. ನಾಗೇಶ್ ವಾಯ್ ಅವರು ವಂದಿಸಿದರು.





