ಕೊಪ್ಪಳ | ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ

ಸಾಂದರ್ಭಿಕ ಚಿತ್ರ
ಕೊಪ್ಪಳ: ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮಲ್ಲಮ್ಮ ಕಲ್ಲೂರ್ (23) ಸಾವನ್ನಪ್ಪಿದವರು.
ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಈ ಘಟನೆ ನಡೆದಿದ್ದು, ಅನಸ್ತೇಶಿಯ ನೀಡದೆ ವೈದ್ಯರು ಚಿಕಿತ್ಸೆ ನಡೆಸಿದ್ದಾರೆ. ಇದರಿಂದ ಮಲ್ಲಮ್ಮ ಮೃತಪಟ್ಟಿದ್ದಾಗಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ:
ಸಂತಾನಹರಣ ಚಿಕಿತ್ಸೆಗೆಂದು ಸೋಮವಾರ ಆಸ್ಪತ್ರೆಗೆ ಮಲ್ಲಮ್ಮ ದಾಖಲಾಗಿದ್ದಾರೆ. ಮಂಗಳವಾರ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಲ್ಲಮ್ಮ ಅವರ ಸ್ಥಿತಿ ಗಂಭೀರವಾಗಿದೆ. ಸ್ಥಿತಿ ಗಂಭೀರವಾಗುತ್ತಲೇ ಆರೋಗ್ಯ ಕೇಂದ್ರದ ವೈದ್ಯರು ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನು ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ಮಲ್ಲಮ್ಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಲ್ಲಮ್ಮ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಅರೋಪಿಸಿ ಆಸ್ಪತ್ರೆಗೆ ಬಂದ ಡಿಎಚ್ಒ ಡಾ.ಲಿಂಗರಾಜ ಮತ್ತು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ.ಈಶ್ವರ ಸವಡಿ ಅವರನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.





