ಯಲಬುರ್ಗಾ | ಭ್ರಷ್ಟಾಚಾರ ಸಮಾಜದ ಬಹುದೊಡ್ಡ ಪಿಡುಗು : ಸಂತೋಷ ಹೆಗಡೆ

ಯಲಬುರ್ಗಾ : ಭ್ರಷ್ಟಾಚಾರವು ಸಮಾಜದ ಬಹುದೊಡ್ಡ ಪಿಡುಗಾಗಿದ್ದು, ಪ್ರತಿಯೊಬ್ಬ ನಾಗರಿಕನೂ ತಮ್ಮ ಸಂಪಾದನೆಯಲ್ಲೇ ತೃಪ್ತಿ ಪಡುವ ಮೂಲಕ ದುರಾಸೆಯಿಂದ ಮುಕ್ತರಾಗಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ವಿಶ್ರಾಂತ ನ್ಯಾಯಮೂರ್ತಿಗಳಾದ ಎನ್.ಸಂತೋಷ ಹೆಗಡೆ ಹೇಳಿದರು.
ಯಲಬುರ್ಗಾ ಪಟ್ಟಣದ ಸಾಯಿ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ಮುಧೋಳ ಗ್ರಾಮದ ದಿ.ಗುರುಬಸಪ್ಪ ಕಳಕಪ್ಪ ಪಲ್ಲೇದ ಇವರ 50ನೇ ಪುಣ್ಯತಿಥಿಯ ಪುನರ್ ಸ್ಮರಣೆ ಕಾರ್ಯಕ್ರಮ ಮತ್ತು ಶ್ರೀ ಎಸ್.ಜಿ. ಪಲ್ಲೇದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು ಹಾಗೂ ಗದಗ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು, ಇವರ ಅತ್ಮಕಥನ ಗ್ರಂಥ ಬಿಡುಗಡೆ ಮತ್ತು ಶ್ರೀ ಕೆ.ಜಿ. ಪಲ್ಲೇದ ಬಿ.ಕಾಂ. (ಸಿ.ಎ.) ತೆರಿಗೆ ಸಲಹೆಗಾರರು ಯಲಬುರ್ಗಾ ಇವರ ನೂತನ ಕಾರ್ಯಾಲಯ "ಸಾಯಿ ಅಸೋಶಿಯೇಟ್ಸ್" ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ. 108 ಪ.ಪೂ. ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಧರ ಮುರಡಿ ಹಿರೇಮಠ ಯಲಬುರ್ಗಾ ಮತ್ತು ಶ್ರೀ ಪರಮ ಪೂಜ್ಯ ಗುರುಪಾದ ದೇವರು ಗುಲಗಂಜಿಮಠ ರೋಣ ವಹಿಸಿದ್ದರು.
ಈ ವೇಳೆ ಎಸ್.ಜಿ. ಪಲ್ಲೇದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು, ವೀರಭದ್ರಪ್ಪ ಗು. ಪಲ್ಲೇದ, ಅಡಿವೆಪ್ಪ ಗು. ಪಲ್ಲೇದ ನಿವೃತ್ತ ಕೃಷಿ ಅಧಿಕಾರಿಗಳು, ಕಳಕಪ್ಪ ಗು. ಪಲ್ಲೇದ ತೆರಿಗೆ ಸಲಹೆಗಾರರು ಯಲಬುರ್ಗಾ, ಸಂತೋಷ ಶಿ. ಪಲ್ಲೇದ ಜಿಲ್ಲಾ ನ್ಯಾಯಾಧೀಶರು ಬೆಂಗಳೂರು, ಈಶ್ವರ ಭೂತೆ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು ಹಾಗೂ ಗ್ರಾಹಕರ ವೇದಿಕೆಯ ಅಧ್ಯಕ್ಷರು ಧಾರವಾಡ, ಶ್ರೀ ವಿ.ಬಿ. ಸಿರಿಯಣ್ಣವರ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು ಹುಬ್ಬಳ್ಳಿ, ಶ್ರೀ ಡಿ.ವಾಯ್, ಬಸಾಪೂರ ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು ಬಾಗಲಕೋಟೆ, ಯಲಬುರ್ಗಾ, ಶ್ರೀ ಬಾಳಪ್ಪ ಭೂತೆ ವಿಶ್ರಾಂತ ನ್ಯಾಯಾಧೀಶರು ಹಾಗೂ ವಕೀಲರು ಕೊಪ್ಪಳ, ಶ್ರೀ ಅಮರೇಶ್ ಆರ್. ನಿರ್ದೇಶಕರು ಆಡಳಿತ-1 ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್ ಬೆಂಗಳೂರು. ಶ್ರೀ ಜೆ. ನಂದಕುಮಾರ ನಿವೃತ್ತ ಡಿ.ಸಿ. ಆಧಾಯ ತೆರಿಗೆ ಇಲಾಖೆ ಹುಬ್ಬಳ್ಳಿ, ಶ್ರೀ ಕೆ.ಬಿ. ಧರಣಾ ನಿವೃತ್ತ ಎಸ್.ಪಿ. ಲೋಕಾಯುಕ್ತರು ಗದಗ, ಶ್ರೀ ಶರಣಪ್ಪ ಎನ್, ಅಕ್ಕಿ ವಿಶ್ರಾಂತ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಗದಗ, ಶ್ರೀ ಸಂಗಣ ಹೈಕೋರ್ಟ್ ವಕೀಲರು ಧಾರವಾಡ, ಶ್ರೀ ಕೆ.ಎಲ್. ಪಾಟೀಲ್ ಹೈಕೋರ್ಟ್ ವಕೀಲರು ಧಾರವಾಡ, ಶ್ರೀ ಸಿ.ಹೆಚ್. ಪೊಲೀಸ್ ಪಾಟೀಲ್ ಯಲಬುರ್ಗಾ, ಶ್ರೀ ಬಸವಲಿಂಗಪ್ಪ ಭೂತೆ ಮಾಜಿ ಜಿಲ್ಲಾಧ್ಯಕ್ಷರು ಪಂಚಮಸಾಲಿ ಸಮಾಜ, ಶ್ರೀ ಶೇಖರಗೌಡ ಉಳ್ಳಾಗಡ್ಡಿ ಆರ್.ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಯಲಬುರ್ಗಾ, ಇನ್ನು ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಪಲ್ಲೇದ ಕುಟುಂಬದ ಸಮಸ್ತ ಬಂಧುಗಳು ಹಾಗೂ ಮುಧೋಳ ಗ್ರಾಮದ ಸಾರ್ವಜನಿಕರು ಹಾಗೂ ಯಲಬುರ್ಗಾ ಪಟ್ಟಣದ ಸಮಸ್ತ ಗುರು-ಹಿರಿಯರು ಹಿತೈಷಿಗಳು, ಇನ್ನೂ ಹಲವಾರು ಉಪಸ್ಥಿತರಿದ್ದರು.







