ಯಲಬುರ್ಗಾ: ರೋಗಿಗಳಿಗೆ ಕಿಟ್ ವಿತರಿಸಿ ಮೀಲಾದುನ್ನೆಬಿ ಆಚರಿಸಿದ ಯುವಕರು

ಯಲಬುರ್ಗಾ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಗ್ರಾಮದ ಮುಸ್ಲಿಂ ಯುವಕರು ಸಾಮಾಜಿಕ ಸೇವೆಯ ಮೂಲಕ ಮೀಲಾದುನ್ನೆಬಿ ಆಚರಿಸಿ ಗಮನ ಸೆಳೆದಿದ್ದಾರೆ.
ಗ್ರಾಮದ ಮುಸ್ಲಿಂ ನೌಜಾವಾನ್ ಕಮೀಟಿ ವತಿಯಿಂದ 20ರಿಂದ 30ಕ್ಕೂ ಹೆಚ್ಚು ಯುವಕರು ಹಣ ಸಂಗ್ರಹಿಸಿ ಮೀಲಾದುನ್ನೆಬಿ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್‌ಗಳನ್ನು ನೀಡಿದ್ದಾರೆ.
ಕಿಟ್‌ಗಳನ್ನು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ, ಎಸ್.ಎಸ್. ಆಸ್ಪತ್ರೆ, ಗಾಣದಾಳ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯಾ ಮಸೀದಿ ಹಿರೇ ವಂಕಲಕುಂಟಾ ಅಧ್ಯಕ್ಷರಾದ ಲಾಲ್ ಸಾಬ್, “ಮೀಲಾದುನ್ನೆಬಿ ಪ್ರಯುಕ್ತ ನಮ್ಮ ಊರಿನ ಮುಸ್ಲಿಂ ಯುವಕರು ಒಗ್ಗಟ್ಟಾಗಿ ಹಣ ಸಂಗ್ರಹಿಸಿ, ನಮ್ಮ ಹಿರಿಯರ ಕೈಯಾರೆ ರೋಗಿಗಳಿಗೆ ಹಣ್ಣು-ಹಂಪಲು, ಹಾಲು ಹಾಗೂ ಆಹಾರ ಸಾಮಗ್ರಿಗಳನ್ನು ನೀಡಿರುವುದು ನಮಗೆ ತುಂಬಾ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ಪೈಗಂಬರ್ ಅವರ ಜೀವನದ ಪ್ರಮುಖ ಸಂದೇಶಗಳಲ್ಲಿ ಮಾನವೀಯತೆ, ದಯೆ, ಸಹಾಯ ಮತ್ತು ಸಹೋದರತ್ವವೂ ಪ್ರಮುಖವಾಗಿವೆ. ಅದನ್ನು ನಮ್ಮ ಯುವಕರು ತಮ್ಮ ಕಾರ್ಯದ ಮೂಲಕ ತೋರಿಸಿದ್ದಾರೆ. ಇದೇ ರೀತಿಯಲ್ಲಿ ನಮ್ಮ ಯುವಕರು ಮುಂದೆಯೂ ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು” ಎಂದು ಹೇಳಿದರು.
ಮೌಲಾನಾ ಸಾದ್ ಅವರು ಮಾತನಾಡಿ, ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಮಹತ್ವ ಹಾಗೂ ಅವರ ಜೀವನ, ಸರಳತೆ, ದಯೆ, ಸಹಾನುಭೂತಿ, ಬಡವರ ಹಾಗೂ ಸಂಕಷ್ಟದಲ್ಲಿರುವವರ ಮೇಲಿನ ಕಾಳಜಿ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಶ್ಯಾಮಿದ್ ಸಾಬ್ ಗುಬ್ಬಿ, ನಝೀರ್ ಮಿಯಾ ಕುಷ್ಟಗಿ, ಮೌಲಾ ಸಾಬ್ ಮುಲ್ಲಾರ್, ಹುಸೇನ್ ಸಾಬ್ ಬಳಿಗೇರ,ಲಾಲ್ ಸಾಬ್ ಟಪ್ಪದ, ಮುನೀರ್ ಸಾಬ್ ಕುಷ್ಟಗಿ, ಸದ್ದಾಂ ಹುಸೇನ್ ಅತ್ತಾರ, ಖಾಸಿಂ ಅಲಿ ಗುಬ್ಬಿ, ಅಶ್ರಫ್ ಅಲಿ ಕುಷ್ಟಗಿ, ಹೊನ್ನೂರು ಸಾಬ್ ಮುಲ್ಲಾರ್, ಮೂರ್ತಜಾ ಸಾಬ್ ಅತ್ತಾರ್,ರಾಜಾ ಸಾಬ್ ಕಟ್ಟಿಮನಿ,ಬಾಷಾ ಅತ್ತಾರ್, ಅಜ್ಮೀರ್ ಮುಲ್ಲಾರ್,ರಾಜಾ ಸಾಬ್ ಮುಲ್ಲಾರ್,ಮೆಹಬೂಬ್ ಕಟ್ಟಿಮನಿ, ಹುಸೇನ್ ಬಾಷಾ ಬಳಿಗೇರ, ಅಲ್ಲಬಕ್ಷ ಅತ್ತಾರ್,ಅಸ್ಲಾಂ ಅತ್ತಾರ್, ಶಾಕಿರ್ ಕಟ್ಟಿಮನಿ, ಶರೀಫ್ ಸಾಬ್ ಕಟ್ಟಿಮನಿ, ಶಾಮಿದ್ ಸಾಬ್ ಅತ್ತಾರ್,ಮೌಲಾಸಾಬ್ ಕಟ್ಟಿಮನಿ,ರಾಜಾ ಸಾಬ್ ಮುಲ್ಲಾರ್, ಶರೀಫ್ ಸಾಬ್ ಕಟ್ಟಿಮನಿ, ಬಾರೆ ಸಾಬ್, ಹುಸೇನ್ ಬಾಷಾ ಗುಬ್ಬಿ,ಮಹಮ್ಮದ್ ಉಪ್ಪಿನ ಬೆಟಗೇರಿ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು, ನೌಜಾವಾನ್ ಕಮಿಟಿಯ ಯುವಕರು ಉಪಸ್ಥಿತರಿದ್ದರು.






