ಟಿ20 ಸರಣಿ | ಝಿಂಬಾಬ್ವೆ ವಿರುದ್ಧ ಭಾರತಕ್ಕೆ 23 ರನ್ ಗಳ ಜಯ
PC : BCCI
ಹರಾರೆ : ಇಲ್ಲಿನ ಹರಾರೆ ಸ್ಪೋರ್ಟ್ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಮೂರನೇ ಪಂದ್ಯದದಲ್ಲಿ ಝಿಂಬಾಬ್ವೆ ವಿರುದ್ಧ ಭಾರತ ತಂಡವು 23 ರನ್ ಗಳಿಂದ ಜಯಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಭಾರತದ ಪರ ನಾಯಕ ಶುಭಮನ್ ಗಿಲ್ 49 ಎಸೆತಗಳಲ್ಲಿ 66 ರನ್ ಗಳಿಸಿದರು. 7 ಬೌಂಡರಿ ಸಹಿತ 3 ಸಿಕ್ಸರ್ ಬಾರಿಸಿದ ಅವರು ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ಋತುರಾಜ್ ಗಾಯಕ್ವಾಡ್ 49 ರನ್ ಗಳಿಸಿದ ವಿಕೆಟ್ ಒಪ್ಪಿಸಿದರು. ಆ ಮೂಲಕ ಅರ್ಧ ಶತಕ ವಂಚಿತರಾದರು. ಇನ್ನುಳಿದಂತೆ ಯಶಸ್ವಿ ಜೈಸ್ವಾಲ್ 36, ಅಭಿಷೇಕ್ ಶರ್ಮಾ 10, ಸಂಜು ಸ್ಯಾಮ್ಸನ್ 12, ರಿಂಕು ಸಿಂಗ್ 1 ರನ್ ಗಳಿಸಿದರು.
ಭಾರತ ನೀಡಿದ 183 ರನ್ ಗಳ ಬೆನ್ನತ್ತಿದ ಝಿಂಬಾಬ್ವೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರು. ಅವೇಶ್ ಖಾನ್ 2,ಖಲೀಲ್ ಅಹ್ಮದ್ 1 ವಿಕೆಟ್ ಪಡೆದರು.
Next Story