Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಇನ್ನಷ್ಟು ಪಕ್ವವಾಗಲಿ 'ನಾ ರಾಜಗುರು'

ಇನ್ನಷ್ಟು ಪಕ್ವವಾಗಲಿ 'ನಾ ರಾಜಗುರು'

ಗಣೇಶ ಅಮೀನಗಡಗಣೇಶ ಅಮೀನಗಡ18 Aug 2023 10:54 AM IST
share
ಇನ್ನಷ್ಟು ಪಕ್ವವಾಗಲಿ ನಾ ರಾಜಗುರು

‘‘ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ

ಅಂಬುಜಕೆ ಭಾನುವಿನ ಉದಯದ ಚಿಂತೆ

ಭ್ರಮರಕ್ಕೆ ಪರಿಮಳವ ಬಂದುಂಬುವ ಚಿಂತೆ’’

ಹೀಗೆ ವಚನಗಳನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲಕ ಪ್ರಸಾರಗೊಳಿಸಿದವರು ಪಂ.ಬಸವರಾಜ ರಾಜಗುರು. ಇವರಿಗಿಂತ ಮೊದಲು ಮುಂಬೈನ ಎಚ್‌ಎಂವಿ (ಹಿಸ್ ಮಾಸ್ಟರ್ಸ್‌ ವೈಸ್) ಸಂಸ್ಥೆಯ ಮೂಲಕ ವಚನಗಳನ್ನು ಹಾಡಿದವರು ಗಾನಯೋಗಿ ಪಂಚಾಕ್ಷರಿ ಗವಾಯಿಗಳು. ಇವರ ನಂತರ ಪಂ.ಮಲ್ಲಿಕಾರ್ಜುನ ಮನ್ಸೂರ, ಪುಟ್ಟರಾಜ ಗವಾಯಿಗಳು, ಪಂ.ಬಸವರಾಜ ರಾಜಗುರು. ಇವರ ಬಳಿಕ ಪಂ.ಸಿದ್ದರಾಮ ಜಂಬಲದಿನ್ನಿ, ಪಂ.ಅರ್ಜುನಸಾ ನಾಕೋಡ, ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಸಂಗಮೇಶ್ವರ ಗುರವ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವವರು ಪಂ.ಸೋಮನಾಥ ಮರಡೂರ, ಪಂ.ಎಂ.ವೆಂಕಟೇಶಕುಮಾರ್, ಪಂ.ಗಣಪತಿ ಭಟ್ ಹಾಸಣಗಿ, ಪಂ.ಕೈವಲ್ಯಕುಮಾರ್ ಗುರವ, ಪಂ.ಡಿ.ಕುಮಾರದಾಸ ಮೊದಲಾದವರಿದ್ದಾರೆ. ಇದರೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಬೆಳೆಸಿದವರಲ್ಲಿ ಸವಾಯಿ ಗಂಧರ್ವರು, ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ ಸೇರಿದಂತೆ ಮೇಲೆ ತಿಳಿಸಿದವರೆಲ್ಲರೂ ಸೇರುತ್ತಾರೆ. ಈಮೂಲಕ ಧಾರವಾಡವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ಮೂಲಕ ವಚನಗಳನ್ನು ಹಾಡುವ ತವರು ಎಂದು ಖ್ಯಾತಿಗೊಳಿಸಿದ್ದು ಇವರೆಲ್ಲ. ಇದನ್ನು ಪ್ರಸ್ತಾಪಿಸಲು ಕಾರಣವಿದೆ; ಕಳೆದ ವಾರ ಮೈಸೂರಿನಲ್ಲಿ ರಂಗವಲ್ಲಿ ತಂಡವು ಆಯೋಜಿಸಿದ್ದ ‘ರಂಗಸಂಭ್ರಮ-2023’ ನಾಟಕೋತ್ಸವದಲ್ಲಿ ‘ನಾ ರಾಜಗುರು’ ಎಂಬ ಏಕವ್ಯಕ್ತಿ ನಾಟಕ (ಆಗಸ್ಟ್ 10) ಪ್ರಯೋಗಗೊಂಡಿತು. ‘ಎನ್ನ ಕಾಯವ ದಂಡಿಗೆಯ ಮಾಡಯ್ಯ’, ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ಎನಗಿಂತ ಕಿರಿಯರಿಲ್ಲ’, ‘ಮಡಕೆಯ ಮಾಡುವರೆ’, ‘ವಚನದಲ್ಲಿ ನಾಮಾಮೃತವ ತುಂಬಿ’, ‘ನಂಬರು ನೆಚ್ಚರು’ ಮೊದಲಾದ ವಚನಗಳನ್ನು ಕರ್ಣಾನಂದಗೊಳಿಸಿದವರು ಬಸವರಾಜ ರಾಜಗುರು. ಇಂತಹ ರಾಜಗುರು ಅವರ ಸಂಗೀತ ಬದುಕನ್ನು ಹಿಡಿದಿಟ್ಟ ನಾಟಕವಿದು. ಅದರಲ್ಲೂ ರಾಜಗುರು ಅವರ ಮೊಮ್ಮಗ ವಿಶ್ವರಾಜ ಅವರೇ ಬಸವರಾಜರ ಪಾತ್ರಧಾರಿಯಾಗಿ ಬಿಚ್ಚಿಟ್ಟಿದ್ದು ಗಮನಾರ್ಹ. ಹಾಡುತ್ತ, ಅಭಿನಯಿಸುತ್ತ ಪ್ರೇಕ್ಷಕರಿಗೆ ಬೋರಾಗದ ಹಾಗೆ ನೋಡಿಕೊಂಡರು. ನಾಟಕ ಶುರುವಾಗುವುದು ರಾಜಗುರು ಅವರ ಹುಟ್ಟಿನ ವಿವರಗಳಿಂದ. ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳದಲ್ಲಿ. ಬಸವರಾಜರ ತಂದೆ ಮಹಾಂತಸ್ವಾಮಿ. ಕರ್ನಾಟಕ ಸಂಗೀತ ಕಲಿತಿದ್ದ, ಪಿಟೀಲು ನುಡಿಸುತ್ತಿದ್ದ ಮಹಾಂತಸ್ವಾಮಿಗಳು ತಮ್ಮ ಮಗನಿಗೆ ಮೊದಲ ಗುರುವಾದರು. ನಂತರ ವಾಮನರಾವ್ ಮಾಸ್ತರ ನಾಟಕ ಕಂಪೆನಿ, ಶಿವಯೋಗ ಮಂದಿರ, ಪಂಚಾಕ್ಷರಿ ಗವಾಯಿಗಳು, ಸವಾಯಿ ಗಂಧರ್ವರು, ಪಂ.ನೀಲಕಂಠ ಮಿರಜಕರ ಬುವಾ, ಉಸ್ತಾದ್ ವಹೀದಾಖಾನ್. ಗದುಗಿನ ಪಂಚಾಕ್ಷರಿ ಗವಾಯಿಗಳ ಸಂಚಾರಿ ಸಂಗೀತ ಪಾಠಶಾಲೆಯೊಳಗೆ ಕಲಿತ ಅವರು ನಂತರ ಮುಂಬೈಗೆ ತೆರಳುತ್ತಾರೆ. ಅಲ್ಲಿಂದ ಅವರ ಸಂಗೀತ ಪಯಣ ಮುಂದುವರಿಯುತ್ತದೆ. ಇದರೊಂದಿಗೆ ರಾಜಗುರು ಅವರು ಹಾಡುತ್ತಿದ್ದ ಚೀಜ್, ವಚನಗಳನ್ನು ವಿಶ್ವರಾಜ ಹಾಡುತ್ತ ರಂಗದ ಮೇಲೆ ಮಿಂಚುತ್ತಾರೆ. ವಿಶ್ವರಾಜ ಅವರು ಬಸವರಾಜ ರಾಜಗುರು ಅವರ ಮೊಮ್ಮಗ ಎನ್ನುವುದು ಗೊತ್ತಾಗುತ್ತದೆ. ಆದರೆ ಅವರು ರಾಜಗುರು ಅವರ ಪುತ್ರ ನಿಜಗುಣ ಅವರ ಪುತ್ರ ಎಂದು ಪರಿಚಯಿಸಿಕೊಂಡರೆ ಚೆನ್ನ. ಹಾಗೆಯೇ ಪಂಡಿತ್ ತಾರಾನಾಥ ಅವರು ರಾಜಗುರು ಅವರನ್ನು ಬೆಂಗಳೂರಿಗೆ ಆಹ್ವಾನಿಸಿ ಹಾಡಿಸಿದ್ದರ ಪ್ರಸ್ತಾಪ ನಾಟಕದಲ್ಲಿ ಬರುತ್ತದೆ. ಹೀಗೆಯೇ ಪಂಡಿತ್ ತಾರಾನಾಥ ಅವರ ಪುತ್ರ, ಖ್ಯಾತ ಸರೋದ್ ವಾದಕ ಪಂ.ರಾಜೀವ ತಾರಾನಾಥ ಅವರ ಪ್ರಸ್ತಾಪವೂ ಬರಬೇಕಿತ್ತು. ಏಕೆಂದರೆ ಧಾರವಾಡಕ್ಕೆ ಹೋದಾಗಲೆಲ್ಲ ರಾಜಗುರು ಅವರ ಮನೆಗೆ ತಪ್ಪದೆ ಭೇಟಿ ಕೊಟ್ಟು, ತಾಸುಗಟ್ಟಲೆ ಸಂಗೀತ ಕುರಿತು ಮಾತನಾಡುತ್ತಿದ್ದವರು ಪಂ.ರಾಜೀವ ತಾರಾನಾಥ. ಹೀಗೆಯೇ ರಾಜಗುರು ಅವರು ಮುಂಬೈಗೆ ತೆರಳಲು ನೆರವಾದವರು ರಂಗಕರ್ಮಿಯಾಗಿದ್ದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು. ಸಂಗೀತದಲ್ಲೇ ಮುಂದುವರಿಯಬೇಕು, ಸಾಧನೆಗೈಯಬೇಕು, ಇದಕ್ಕಾಗಿ ಮುಂಬೈಗೆ ಕಳಿಸಿಕೊಡಿ ಎಂದು ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಬಳಿ ರಾಜಗುರು ಬಳಿ ಕೇಳಿದಾಗ ಒಪ್ಪಿರಲಿಲ್ಲ. ಏಕೆಂದರೆ ರಾಜಗುರು ಅವರು ಗದುಗಿನ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘದಲ್ಲಿ ಪ್ರಮುಖ ಕಲಾವಿದರು. ಅದರಲ್ಲೂ ಅವರ ಸ್ತ್ರಿಪಾತ್ರ ಹಾಗೂ ಹಾಡುಗಾರಿಕೆಯಿಂದ ಪ್ರಸಿದ್ಧರಾಗಿದ್ದರು. ಇಂಥ ಕಲಾವಿದರನ್ನು ಬಿಟ್ಟುಕೊಡದ ಗುರುಗಳಾದ ಪಂಚಾಕ್ಷರಿ ಗವಾಯಿಗಳು ಗುರುದಕ್ಷಿಣೆಯಾಗಿ 300 ರೂಪಾಯಿ ಸಲ್ಲಿಸಿ ಹೋಗಬಹುದೆಂದು ಅಪ್ಪಣೆ ಕೊಡಿಸುತ್ತಾರೆ. ಆಗ ಪೇಚಿಗೆ ಸಿಕ್ಕ ರಾಜಗುರು ಅವರು ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಬಳಿ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಆಮೇಲೆ ಹೇಗೋ 300 ರೂಪಾಯಿ ಹೊಂದಿಸಿಕೊಂಡು ಬಂದ ಗಂಗಾಧರ ಶಾಸ್ತ್ರಿಗಳು, ರಾಜಗುರು ಅವರ ಕೈಗಿಡುತ್ತಾರೆ. ಖುಷಿಯಿಂದ ರಾಜಗುರು ಅವರು ತಮ್ಮ ಗುರುಗಳಿಗೆ ಗುರುಕಾಣಿಕೆ ಸಲ್ಲಿಸಿ ಮುಂಬೈಗೆ ತೆರಳುತ್ತಾರೆ. ಈ ಅಂಶವನ್ನು ನಾಟಕದಲ್ಲಿ ಅಳವಡಿಸಿಕೊಂಡರೆ ಚೆನ್ನಾಗಿರುತ್ತದೆ.

ಇನ್ನು ವಿಶ್ವರಾಜರ ವೇಷಭೂಷಣ, ಹಾವಭಾವ ಬಸವರಾಜರ ಹಾಗೆಯೇ ಇತ್ತು. ಅವರ ಹಾಡುಗಾರಿಕೆಗೆ ಅಕ್ಷಯ್ ಜೋಶಿ ಅವರ ತಬಲಾ ಹಾಗೂ ವೆಂಕಟೇಶ ರೆಡ್ಡಿ ಅವರ ಹಾರ್ಮೋನಿಯಂ ನಾಟಕಕ್ಕೆ ಕಳೆ ತಂದವು. ಇವರಿಬ್ಬರೂ ರಂಗದ ಮೇಲೇ ಇದ್ದು, ಸಂಗೀತ ಸಾಥ್ ನೀಡಿದ್ದು ಸಾರ್ಥಕವಾಯಿತು. ಆಗಾಗ ಅವರನ್ನು ಮಾತನಾಡಿಸುವ ವಿಶ್ವರಾಜರ ಜಾಣ್ಮೆ ಮೆಚ್ಚುವಂಥದ್ದು. ಸರಳ ರಂಗಸಜ್ಜಿಕೆಯಲ್ಲಿ ತಂಬೂರಕ್ಕೆ ತೂಗು ಹಾಕಿದ ಟೋಪಿ, ಕೋಟು, ಸ್ಕಾರ್ಫ್ ಅನ್ನು ತಮ್ಮ ಅಜ್ಜನ ಹಾಗೆ ಹಾಕಿಕೊಂಡು ವಿಶ್ವರಾಜ ಮಾತನಾಡುತ್ತಾರೆ. ಆದರೆ ಅವರು ಅವಸರವಾಗಿ ಅಭಿನಯಿಸುವ ಬದಲು ತಾಳ್ಮೆಯಿಂದ ಹಾಡುತ್ತ, ಅಭಿನಯಿಸಬೇಕು. ಈಮೂಲಕ ಪಕ್ವವಾಗಬೇಕು. ಬಸವರಾಜ ರಾಜಗುರು ಅವರು ತಾಳ್ಮೆಯಿಂದ ಮಾತನಾಡುತ್ತಿದ್ದರು ಜೊತೆಗೆ ಹಾಡುತ್ತಿದ್ದರು. ಇದು ವಿಶ್ವರಾಜ ಅವರಿಗೆ ಅಸಾಧ್ಯವೇನೂ ಅಲ್ಲ. ಅವರು ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದಾರೆ ಜೊತೆಗೆ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದಿದ್ದಾರೆ. ಹೀಗಾಗಿ ರಾಜಗುರು ಅವರ ಸಂಗೀತ ಬದುಕಿನ ಕುರಿತು ನಾಟಕವಾಗಿಸುವ ಪ್ರಯತ್ನ ಚೆನ್ನಾಗಿದೆ. ಆದರೆ ಪರಿಪೂರ್ಣವಾಗಬೇಕು. ಅಂದರೆ ಈ ನಾಟಕ ಕಾಯಾಗಿದ್ದು ಹಣ್ಣಾಗಬೇಕಿದೆ. ಏಕೆಂದರೆ ಸಂಗೀತದಲ್ಲಿ ರಾಜಗುರು ಅವರನ್ನು ‘ಹುಕುಮಿ ಎಕ್ಕಾ’ ಎನ್ನುತ್ತಿದ್ದರು. ಅಂದರೆ ಇಸ್ಪೀಟಿನಲ್ಲಿ ಹುಕುಮಿ ಎಕ್ಕಾ ಬಂದರೆ ಸೋಲೇ ಇಲ್ಲ; ಗೆದ್ದ ಹಾಗೆ. ಹಾಗೆಯೇ ರಾಜಗುರು ಅವರು ಹಾಡಿದರೆ ಪ್ರೇಕ್ಷಕರು ವಾ ವಾ ಎನ್ನುತ್ತಿದ್ದರು. ಅಲ್ಲಿಗೆ ಅವರ ಹಾಡುಗಾರಿಕೆ, ಕಛೇರಿ ಯಶಸ್ವಿಯಾದ ಹಾಗೆ. ಈ ನಾಟಕವೂ ಹುಕುಮಿ ಎಕ್ಕಾವಾಗಲಿ ಎಂದು ಹಾರೈಸುವೆ.

ಇನ್ನು ಆಟಮಾಟ ತಂಡದ ಮೂಲಕ ಗಮನಾರ್ಹ ನಾಟಕಗಳನ್ನು ಕೊಟ್ಟವರು ಮಹಾದೇವ ಹಡಪದ. ಈ ನಾಟಕವೂ ಪ್ರಮುಖವಾದುದು. ಏಕೆಂದರೆ ಹಿಂದೊಮ್ಮೆ ಅರಮನೆಯಲ್ಲಿ, ಶ್ರೀಮಂತರ ಮನೆಯಲ್ಲಿ ಮಾತ್ರ ನಡೆಯುತ್ತಿದ್ದ ಸಂಗೀತ ಕಚೇರಿಗಳು ಸಾಮಾನ್ಯರಿಗೂ ತಲುಪಿದ್ದು ಆಗಿನ ನಾಟಕಗಳ ಮೂಲಕ. ಇದರಿಂದ ಆಗ ನಾಟಕಗಳೆಂದರೆ ಸಂಗೀತ ಕಚೇರಿಗಳೂ ಆಗಿದ್ದವು. ಹೀಗೆ ಸಂಗೀತ ಮತ್ತು ನಟನೆಯನ್ನು ಒಟ್ಟಿಗೇ ಕೊಟ್ಟ ನಾಟಕವಿದು. ಸರಳ ರಂಗಸಜ್ಜಿಕೆಯಲ್ಲಿ ಇದನ್ನು ಆಗುಮಾಡಿಕೊಟ್ಟ ಮಹಾದೇವ ಹಡಪದ ಅವರ ಶ್ರಮವನ್ನು ಇನ್ನಷ್ಟು ಸಾರ್ಥಕಗೊಳಿಸಬೇಕಾದುದು ವಿಶ್ವರಾಜರ ಹೆಗಲ ಮೇಲಿದೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X