ಲಿಂಗಸುಗೂರು | ಚಿನ್ನದ ಸರ ಕಳ್ಳನ ಬಂಧನ; ಚಿನ್ನಾಭರಣ ಜಪ್ತಿ

ರಾಯಚೂರು, ಜ.22: ಮನೆನಲ್ಲಿ ಇಟ್ಟಿದ್ದ ಮಾಂಗಲ್ಯ ಸರ ಹಾಗೂ ಮೊಬೈಲ್ ಕದ್ದಿದ್ದ ಆರೋಪಿಯನ್ನು ಲಿಂಗಸುಗೂರು ಠಾಣೆ ಪೊಲೀಸರು ಬಂಧಿಸಿ, ಆತನಿಂದ 6.20 ಲಕ್ಷ ರೂ. ಮೌಲ್ಯದ 4 ತೊಲೆ 5 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ ಸುಮಾರು 8,000 ರೂ. ಮೌಲ್ಯದ ಸ್ಯಾಮಸಂಗ್ ಮೊಬೈಲ್ ಅನ್ನು ಜಪ್ತಿ ಮಾಡಿದ್ದಾರೆ.
ಜನವರಿ 20, 2026ರಂದು ರಂಗನಾಥ ಕುಲಕರ್ಣಿ, ಕಸಬಾ ಲಿಂಗಸುಗೂರು ನಿವಾಸಿ, ತಮ್ಮ ಮನೆಯ ಬ್ಯಾಗ್‌ನಲ್ಲಿ ಇಟ್ಟಿದ್ದ ಮಾಂಗಲ್ಯ ಸರ ಹಾಗೂ ಮೊಬೈಲ್ ಕಳ್ಳತನವಾಗಿರುವ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಲಿಂಗಸುಗೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಲಿಂಗಸುಗೂರು ಠಾಣೆಯ ಆರಕ್ಷಕ ನಿರೀಕ್ಷಕ ಹೊಸಕೇರಪ್ಪ ಅವರು ವಿಶೇಷ ತಂಡವನ್ನು ರಚಿಸಿದ್ದರು. ತಂಡವು ಕಳ್ಳನನ್ನು ಬಂಧಿಸಿ, ಕದ್ದ ಮಾಂಗಲ್ಯ ಸರ ಹಾಗೂ ಮೊಬೈಲ್ ಅನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ತನಿಖಾ ತಂಡದಲ್ಲಿ ಆರಕ್ಷಕ ಉಪನಿರೀಕ್ಷಕಿ ರತ್ನಮ್ಮ ಹಾಗೂ ಸಿಬ್ಬಂದಿಗಳಾದ ಈರಣ್ಣ, ಸಿದ್ದಪ್ಪ, ಸೋಮು, ಭೀಮಣ್ಣ ಮತ್ತು ಬಸವರಾಜ ಇದ್ದರು.







