ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ಭಾರತದ ಆಟಗಾರರ ಪಟ್ಟಿ; ಧೋನಿ ಹಿಂದಿಕ್ಕಿದ ಕೊಹ್ಲಿ

twitter/kohli
ಹೊಸದಿಲ್ಲಿ: ಡೊಮಿನಿಕಾದಲ್ಲಿ ಇತ್ತೀಚೆಗೆ ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141 ರನ್ನಿಂದ ಗೆಲುವು ದಾಖಲಿಸಿದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚು ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಜಯಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎಂ.ಎಸ್.ಧೋನಿಯವರನ್ನು ಹಿಂದಿಕ್ಕಿದರು.
ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ 499ನೇ ಪಂದ್ಯದಲ್ಲಿ 296ನೇ ಗೆಲುವು ದಾಖಲಿಸಿದರು. ಧೋನಿ 535 ಪಂದ್ಯಗಳಲ್ಲಿ 295 ಗೆಲುವು ದಾಖಲಿಸಿದ್ದರು.
ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಅತ್ಯಂತ ಹೆಚ್ಚು ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಜಯ ಸಾಧಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 24 ವರ್ಷಗಳ ವೃತ್ತಿಜೀವನದಲ್ಲಿ ಭಾರತದ ಪರ 664 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತೆಂಡುಲ್ಕರ್ 72 ಟೆಸ್ಟ್, 234 ಏಕದಿನ, 1 ಟಿ-20 ಸಹಿತ 307 ಪಂದ್ಯಗಳಲ್ಲಿ ಜಯ ದಾಖಲಿಸಿದ್ದರು.
ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಹೆಚ್ಚು ಗೆಲುವು ದಾಖಲಿಸಿದ ಅಗ್ರ-10 ಭಾರತದ ಆಟಗಾರರ ಪಟ್ಟಿ ಇಂತಿದೆ. 1.ಸಚಿನ್ ತೆಂಡುಲ್ಕರ್(664 ಪಂದ್ಯ, 307 ಗೆಲುವು), 2. ವಿರಾಟ್ ಕೊಹ್ಲಿ(499 ಪಂದ್ಯ, 296 ಗೆಲುವು), 3. ಎಂ.ಎಸ್. ಧೋನಿ(535 ಪಂದ್ಯ, 295 ಗೆಲುವು), 4. ರೋಹಿತ್ ಶರ್ಮಾ(442 ಪಂದ್ಯ, 277 ಗೆಲುವು), 5. ಯುವರಾಜ್ ಸಿಂಗ್(399 ಪಂದ್ಯ, 227 ಗೆಲುವು), 6. ರಾಹುಲ್ ದ್ರಾವಿಡ್(504 ಪಂದ್ಯ, 216 ಗೆಲುವು), 7.ಸುರೇಶ್ ರೈನಾ(322 ಪಂದ್ಯ, 190 ಗೆಲುವು), 8. ಹರ್ಭಜನ್ ಸಿಂಗ್ (365 ಪಂದ್ಯ, 185 ಗೆಲುವು), 9. ಸೌರವ್ ಗಂಗುಲಿ(421 ಪಂದ್ಯ, 184 ಗೆಲುವು), 10. ಮುಹಮ್ಮದ್ ಅಝರುದ್ದೀನ್(433 ಪಂದ್ಯ, 182 ಜಯ).







