Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಲಂಡನ್ ಡೈರಿ
  5. ಲಂಡನ್‌ನಲ್ಲಿ ಮಹಾರ್ ರೆಜಿಮೆಂಟ್‌ನ...

ಲಂಡನ್‌ನಲ್ಲಿ ಮಹಾರ್ ರೆಜಿಮೆಂಟ್‌ನ ಹೆಜ್ಜೆಗುರುತು

ನವೀನ ಸುನಗ, ಲಂಡನ್ನವೀನ ಸುನಗ, ಲಂಡನ್27 Nov 2026 2:41 PM IST
share
ಲಂಡನ್‌ನಲ್ಲಿ ಮಹಾರ್ ರೆಜಿಮೆಂಟ್‌ನ ಹೆಜ್ಜೆಗುರುತು

ಲಂಡನ್‌ನ ನ್ಯಾಶನಲ್ ಆರ್ಮಿ ಮ್ಯೂಸಿಯಂಗೆ ಭೇಟಿ ನೀಡಿದ ಬಹುತೇಕರು ಈ ಒಂದು ಪುಟ್ಟ ಬ್ಯಾಡ್ಜ್‌ನ್ನು ಗಮನಿಸದೆ ಇರುವ ಅಥವಾ ಗಮನಿಸಿದರೂ ತಲೆ ಕೆಡಿಸಿಕೊಳ್ಳದ ಸಾಧ್ಯತೆಗಳು ಹೆಚ್ಚು. ಆದರೆ ಈ ಒಂದು ಸಣ್ಣ ಬ್ಯಾಡ್ಜ್ ಹಿಂದೆ ಭಾರತದ ಸಾಮಾಜಿಕ ಇತಿಹಾಸ ಮತ್ತು ಸಾವಿರಾರು ಭಾರತೀಯ ಸೈನಿಕರ ಕಥೆ ಅಡಗಿದೆ. ಈ ಐತಿಹಾಸಿಕ ಮಹಾರ್ ರೆಜಿಮೆಂಟ್ ಬ್ಯಾಡ್ಜ್ ಮಹಾರಾಷ್ಟ್ರದ ಮಹಾರ್ ಸೈನಿಕರ ಪರಂಪರೆಯಿಂದ ಕರ್ನಾಟಕದ ಬೆಳಗಾವಿ ಮತ್ತು ಬ್ರಿಟಿಷ್ ವಸ್ತು ಸಂಗ್ರಹಾಲಯದವರೆಗಿನ ಕಥೆ ಹೇಳುತ್ತದೆ.

ಹದಿನೆಂಟನೇ ಶತಮಾನದಿಂದಲೇ ಈಸ್ಟ್ ಇಂಡಿಯಾ ಕಂಪೆನಿಯ ಬಾಂಬೆ ಸೇನೆಯಲ್ಲಿ ಮಹಾರ್ ಸೈನಿಕರು ಸೇವೆ ಸಲ್ಲಿಸುತ್ತಿದ್ದರು. ಇವರು ಕಂಪೆನಿಯ ಪಡೆಗಳ ಭಾಗವಾಗಿ 1818ರ ಭೀಮ ಕೋರೆಗಾಂವ್ ಕದನದಲ್ಲಿ 2,000 ಸೈನಿಕರಿರುವ ಪೇಶ್ವಾ ದ್ವಿತೀಯ ಬಾಜಿರಾವ್‌ನ ಬಲವಾದ ಸೇನೆಯ ವಿರುದ್ಧ ವೀರಾವೇಶದಿಂದ ಹೋರಾಡಿದ್ದರು. ಇದರ ಸ್ಮರಣಾರ್ಥ ನಿರ್ಮಿಸಲಾದ ವಿಜಯಸ್ತಂಭವು ಮಹಾರ್ ರೆಜಿಮೆಂಟ್‌ನ ಚಿಹ್ನೆಯಲ್ಲೂ ಸ್ಥಾನ ಪಡೆಯಿತು. ಲಂಡನ್‌ನ National Army ಮ್ಯೂಸಿಯಂನ ಸಂಗ್ರಹದಲ್ಲಿ ಈ ವಿಜಯಸ್ತಂಭದ ಚಿತ್ರವಿರುವ ರೆಜಿಮೆಂಟ್‌ನ ಕ್ಯಾಪ್ ಬ್ಯಾಡ್ಜ್ ಕಾಣಸಿಗುತ್ತದೆ.

ಹತ್ತೊಂಭತ್ತನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಭಾರತೀಯ ಸೇನೆಯ ನೇಮಕಾತಿ ನೀತಿಗಳ ಬದಲಾವಣೆಯಿಂದಾಗಿ ಮಹಾರ್‌ರ ನೇಮಕಾತಿ ಸ್ಥಗಿತಗೊಂಡಿತು. ಸುಮಾರು 1917ರ ಆಸುಪಾಸಿನಲ್ಲಿ, ಮೊದಲ ಮಹಾಯುದ್ಧದ ಪರಿಣಾಮ ಸೈನಿಕರ ಅವಶ್ಯಕತೆ ಹೆಚ್ಚದಾಗ 111ನೇ ಮಹಾರ್‌ರ ಘಟಕ ರಚಿಸಲಾಯಿತು. ಈ ಘಟಕವು ಉತ್ತರ-ಪಶ್ಚಿಮ ಗಡಿಭಾಗ ಮತ್ತು ಏಡನ್‌ನಲ್ಲಿ ಸೇವೆ ಸಲ್ಲಿಸಿತು. ಯುದ್ಧ ಮುಗಿದ ಬಳಿಕ ಅದನ್ನು ವಿಸರ್ಜಿಸಲಾಯಿತು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಂದೆ ರಾಮ್‌ಜಿ ಸಕ್ಪಾಲ್ ಸಹ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಸೇನಾ ಸೇವೆಯು ಮಹಾರ್ ಸಮುದಾಯಕ್ಕೆ ಉದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ಪ್ರಗತಿಯ ಅವಕಾಶಗಳನ್ನು ಒದಗಿಸುತ್ತವೆ ಎಂಬ ಅಭಿಪ್ರಾಯ ಬಾಬಾ ಸಾಹೇಬರು ಕೂಡ ಹೊಂದಿದ್ದರು. ಆದ ಕಾರಣ ಅವರು ಸಮುದಾಯದವರ ಸೇನಾ ನೇಮಕಾತಿಯನ್ನು ಪ್ರಬಲವಾಗಿ ಬೆಂಬಲಿಸಿದ್ದರು. ಹೀಗಾಗಿ ಮಹಾರ್ ರೆಜಿಮೆಂಟ್ ಇತಿಹಾಸವು ಮಿಲಿಟರಿ ಇತಿಹಾಸಕ್ಕೆ ಮಾತ್ರ ಸೀಮಿತವಾಗದೆ, ಜಾತಿ, ವರ್ಗ ವ್ಯವಸ್ಥೆ ಮತ್ತು ಸಾಮಾಜಿಕ ಸಮಾನತೆಯ ಹೋರಾಟದೊಂದಿಗೂ ಬೆಸೆದುಕೊಂಡಿದೆ.

ದ್ವಿತೀಯ ಮಹಾಯುದ್ಧ ಆರಂಭದೊಂದಿಗೆ ಮಹಾರ್ ಸೈನಿಕರ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯದ ಸೇರ್ಪಡೆಯಾಯಿತು. 1941ರ ಸುಮಾರು ಮಹಾರ್ ರೆಜಿಮೆಂಟ್ ಅನ್ನು ಪುನರ್‌ರಚಿಸಲಾಯಿತು. ಇದರ ಮೊದಲನೆಯ ಬೆಟಾಲಿಯನ್ ನಮ್ಮದೇ ಕರ್ನಾಟಕದ ಬೆಳಗಾವಿಯಲ್ಲಿ ರಚನಗೊಂಡಿತು. ಹೀಗೆ ಈ ಇತಿಹಾಸವು ಕೇವಲ ಯುದ್ಧಗಳ ಕಥೆಯಾಗಿರದೆ ಕರ್ನಾಟಕದೊಂದಿಗೂ ನೇರ ಸಂಪರ್ಕವನ್ನು ಹೊಂದಿದೆ. ನಂತರದ ದಿನಗಳಲ್ಲಿ ಮಹಾರ್ ರೆಜಿಮೆಂಟ್‌ನ ಘಟಕಗಳು ವಿವಿಧ ಯುದ್ಧಭೂಮಿಗಳಲ್ಲಿ ಸೇವೆ ಸಲ್ಲಿಸುತ್ತಾ, ಕಾರ್ಯಾಚರಣೆ ನಡೆಸುತ್ತ ಬ್ರಿಟಿಷರ ಭಾರತೀಯ ಸೇನೆಯ ವಿಶಾಲ ಯುದ್ಧ ಇತಿಹಾಸದ ಭಾಗವಾದವು.

ಮುಂದೆ 1946 ಆಸುಪಾಸಿನಲ್ಲಿ ರೆಜಿಮೆಂಟ್ ಅನ್ನು, Mahar Machine Gun Regiment ಆಗಿ ಪರಿವರ್ತಿಸಲಾಯಿತು. ಹೊಸ ಚಿಹ್ನೆಯಾಗಿ ಕೋರೆಗಾಂವ್ ವಿಜಯಸ್ತಂಭದೊಂದಿಗೆ ಎರಡು Vickers ಯಂತ್ರತೋಪುಗಳೂ ಸೇರ್ಪಡೆಗೊಂಡವು. ಲಂಡನ್‌ನ National Army ಮ್ಯೂಸಿಯಂನಲ್ಲಿ ಮಹಾರ್ ರೆಜಿಮೆಂಟ್‌ನ ಶೊಲ್ದೆರ್ ಬ್ಯಾಡ್ಜ್ ಗಳು, ಕ್ಯಾಪ್ ಬ್ಯಾಡ್ಜ್‌ಗಳು ಮತ್ತು ಯಂತ್ರತೋಪು ಘಟಕಕ್ಕೆ ಸಂಬಂಧಿಸಿದ ಚಿಹ್ನೆಗಳನ್ನು ಕಾಣಬಹುದು. ಈ ವಸ್ತುಗಳು ರೆಜಿಮೆಂಟ್‌ನ ಬೆಳವಣಿಗೆಯನ್ನು ಸಾರಿ ಹೇಳುತ್ತವೆ.

ಬ್ರಿಟಿಷ್ ಸಾಮ್ರಾಜ್ಯದ ಸೇನೆಯಲ್ಲಿ ಸೇವೆ ಸಲ್ಲಿಸಿದ ಭಾರತೀಯರ ಇತಿಹಾಸವು ಕೇವಲ ಯುದ್ಧ ವರದಿಗಳಲ್ಲೋ ಅಧಿಕೃತ ದಾಖಲೆಗಳಲ್ಲೋ ಉಳಿಯದೆ, ಸೈನಿಕರು ಧರಿಸುತ್ತಿದ್ದ ಬ್ಯಾಡ್ಜ್‌ಗಳು, ಸಮವಸ್ತ್ರಗಳು ಮತ್ತು ಸೇನಾ ದಾಖಲೆಗಳ ರೂಪದಲ್ಲಿಯೂ ಕಾಣುತ್ತವೆ. ಇದೇ ಕಾರಣದಿಂದ ಬ್ರಿಟನ್ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಬಂಧ ಸ್ಪಷ್ಟವಾಗಿ ನಮಗೆ ಗೋಚರಿಸುತ್ತದೆ.

ಭಾರತ ಸ್ವಾತಂತ್ರ್ಯದ ಬಳಿಕ ಮಹಾರ್ ರೆಜಿಮೆಂಟ್ ಭಾರತೀಯ ಸೇನೆಯ ಭಾಗವಾಯಿತು. ಆದರೆ ಲಂಡನ್‌ನ ವಸ್ತುಸಂಗ್ರಹಾಲಯದಲ್ಲಿ ಉಳಿದಿರುವ ಅದರ ಹಳೆಯ ಚಿಹ್ನೆಗಳು ಬ್ರಿಟಿಷ್ ಕಾಲದ ಸೇನಾ ವ್ಯವಸ್ಥೆ, ಭಾರತೀಯ ಸೈನಿಕರ ಕೊಡುಗೆ ಮತ್ತು ಅವರ ಸಾಮಾಜಿಕ ಹಿನ್ನೆಲೆಯನ್ನು ನೆನಪಿಸುತ್ತವೆ.

ಅನೇಕ ಬಾರಿ ಇತಿಹಾಸವನ್ನು ದೊಡ್ಡ ಸ್ಮಾರಕಗಳ ಮೂಲಕನೇ ನೋಡಬೇಕಿಲ್ಲ. ಗಾಜಿನ ಪೆಟ್ಟಿಗೆಯೊಳಗಿನ ಒಂದು ಸಣ್ಣ ಬ್ಯಾಡ್ಜ್ ಕೂಡ ಶತಮಾನಗಳ ಇತಿಹಾಸದ ಚಿತ್ರಣ ನೀಡುತ್ತದೆ. ಮಹಾರ್ ರೆಜಿಮೆಂಟ್‌ನ ಈ ಹೆಜ್ಜೆಗುರುತುಗಳು ಮಹಾರಾಷ್ಟ್ರದ ತಳ ಸಮುದಾಯವೊಂದರ ಇತಿಹಾಸವನ್ನು ಅದರ ಸೈನಿಕ ಪರಂಪರೆ ಹಾಗೂ ಕೊಡುಗೆಗಳನ್ನು, ಕರ್ನಾಟಕದ ಬೆಳಗಾವಿಯೊಂದಿಗಿನ ಅದರ ಸಂಬಂಧವನ್ನು ಮತ್ತು ಬ್ರಿಟಿಷ್ ಸೇನೆಯಲ್ಲಿನ ಭಾರತೀಯರ ಪಾತ್ರವನ್ನು ಒಂದೇ ಕಥೆಯಲ್ಲಿ ಬೆಸೆಯುತ್ತವೆ.

(ಅಂಕಣಕಾರರು ಸಿನೆಮಾ, ಧಾರಾವಾಹಿ, ಸಾಕ್ಷ್ಯಚಿತ್ರಗಳ ನಿರ್ಮಾಣ, ನಿರ್ದೇಶನ, ನಟನೆ, ಬರವಣಿಗೆ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವವರು)

Tags

London
share
ನವೀನ ಸುನಗ, ಲಂಡನ್
ನವೀನ ಸುನಗ, ಲಂಡನ್
Next Story
X