ಕೆ.ಆರ್.ಪೇಟೆ | ಪ್ರಿಯಕರನಿಂದಲೇ ಗೃಹಿಣಿಯ ಕೊಲೆ: ಹತ್ಯೆಗೈದು ಚಿನ್ನಾಭರಣ ದೋಚಿದ ಆರೋಪಿ

ಆರೋಪಿ ಪುನೀತ್
ಮಂಡ್ಯ : ತನ್ನ ಪ್ರಿಯಕರನಿಂದಲೇ ಗೃಹಿಣಿಯೊಬ್ಬರು ಕೊಲೆಗೀಡಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಕರೋಟಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಕೊಲೆಯಾದ ಗೃಹಿಣಿ. ಕರೋಟಿ ಗ್ರಾಮದ ಪುನೀತ್ ಆರೋಪಿ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇಬ್ಬರೂ ಕಳೆದ ರವಿವಾರ ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ. ಆ ಸಮಯದಲ್ಲಿ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಪ್ರೀತಿಯನ್ನು ಕೊಲೆ ಮಾಡಿದ ಪುನೀತ್, ಮೈಮೆಲಿದ್ದ ಚಿನ್ನಾಭರಣ ದೋಚಿ, ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಮೃತದೇಹ ಮುಚ್ಚಿಟ್ಟಿದ್ದ ಎಂದು ತಿಳಿದು ಬಂದಿದೆ.
ತನ್ನ ಪತ್ನಿ ಕಾಣೆಯಾಗಿರುವ ಬಗ್ಗೆ ಪ್ರೀತಿಯ ಪತಿ ಸುಂದರೇಶ್ ಹಾಸನ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಫೋನ್ನಲ್ಲಿನ ಕರೆಯನ್ನು ಪರಿಶೀಲಿಸಿದಾಗ ಪುನೀತ್, ಪ್ರೀತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.





