ಸುಮಲತಾರಿಂದ ಅಂಬರೀಷ್ ಫೌಂಡೇಷನ್ ಲೋಕಾರ್ಪಣೆ

ಮಂಡ್ಯ: ಅಂಬರೀಷ್ ಅವರ ಕನಸುಗಳನ್ನು ಸಾಕಾರಗೊಳಿಸುವ ಉದ್ದೇಶದಿಂದ ಡಾ.ಅಂಬರೀಷ್ ಫೌಂಡೇಷನ್ ಲೋಕಾರ್ಪಣೆ ಮಾಡಿದ್ದೇವೆ. ಇದರೊಂದಿಗೆ ಅಂಬರೀಷ್ ಅವರ ಉದ್ದೇಶ, ಗುರಿಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.
ನಗರದ ಸಂಜಯ ಚಿತ್ರಮಂದಿರದ ಆವರಣದಲ್ಲಿ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಅಂಬರೀಷ್ ಸಂಸ್ಮರಣೆ ಹಾಗೂ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಫೌಂಡೇಷನ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಅಂಬರೀಷ್ ಅವರು ನಮ್ಮನ್ನು ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅವರಿಗೆ ಬಳಷ್ಟು ಕನಸುಗಳು, ಆಸೆಗಳು ಇದ್ದವು. ಅವುಗಳನ್ನು ನಾವು ಮುಂದುವರಿಸಿಕೊಂಡು ಹೋಗಲು ಫೌಂಡೇಷನ್ ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಫೌಂಡೇಷನ್ ವತಿಯಿಂದ ನೀಡಲಾದ 50 ಸಾವಿರ ರೂ.ಗಳ ನಗದು ಪುರಸ್ಕಾರವನ್ನು ಸ್ವೀಕರಿಸಿದ ಐದು ರೂಪಾಯಿ ವೈದ್ಯ ಖ್ಯಾತಿಯ ಚರ್ಮರೋಗ ತಜ್ಞ ಡಾ.ಶಂಕರೇಗೌಡ ಅವರು ನಗರದ ಮುನಿಸಿಫಲ್ ಶಾಲೆಯ ಅಭಿವೃದ್ಧಿಗೆ ನೀಡಿದರು.
Next Story





