Mandya | ಅಶ್ಲೀಲ ಸಂದೇಶ ಕಳುಹಿಸಿದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರಿಂದ ಥಳಿತ

ಸಾಂದರ್ಭಿಕ ಚಿತ್ರ | PC : Image by mamewmy on Magnific
ಮಂಡ್ಯ/ನಾಗಮಂಗಲ : ಅಶ್ಲೀಲ ಸಂದೇಶ ಕಳುಹಿಸಿದ ಉಪನ್ಯಾಸಕನಿಗೆ ಪ್ರಾಂಶುಪಾಲರ ಚೇಂಬರ್ನಲ್ಲೇ ವಿದ್ಯಾರ್ಥಿನಿಯರು ಥಳಿಸಿದ ಘಟನೆ ನಾಗಮಂಗಲ ಪಟ್ಟಣದ ಹೊರವಲಯದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದಿರುವುದು ವರದಿಯಾಗಿದೆ.
ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿನಿಯರನ್ನು ಸಮಾಧಾನಪಡಿಸಿದ್ದಾರೆ.
ಥಳಿತಕ್ಕೊಳಗಾದ ಸಂದರ್ಭದಲ್ಲಿ ಉಪನ್ಯಾಸಕ ವಿದ್ಯಾರ್ಥಿನಿಯರಿಗೆ ಕೈಮುಗಿದು, ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
Next Story




