Mandya | ಜಮೀನು ವಿವಾದ: ವ್ಯಕ್ತಿಯ ಹತ್ಯೆ

ನವೀನ (27)
ಮಂಡ್ಯ : ಜಮೀನು ವಿವಾದ ಸಂಬಂಧ ವ್ಯಕ್ತಿಯೊಬರನ್ನು ಕೊಲೆ ಮಾಡಿರುವ ಘಟನೆ ಪಾಂಡವಪುರ ತಾಲೂಕಿನಲ್ಲಿ ನಡೆದಿರುವುದು ವರದಿಯಾಗಿದೆ.
ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದ ನವೀನ (27) ಕೊಲೆಯಾಗಿರುವ ರೈತ. ಅದೇ ಗ್ರಾಮದ ಚೆಲುವರಾಜ ಮತ್ತು ಅವರ ಮಗ ಕಾಂತರಾಜು ಕೊಲೆ ಆರೋಪಿಗಳಾಗಿದ್ದಾರೆ.
ಜಮೀನಿಗೆ ನೀರು ಹಾಯಿಸಲು ನವೀನ ತೆರಳಿದ್ದಾಗ, ಆತನನ್ನು ಕೊಲೆಗೈದು ಕೊಳಬಾವಿ ಕಟ್ಟೆ ಬಳಿ ನಾಲೆಗೆ ಎಸಯಲಾಗಿತ್ತು ಎನ್ನಲಾಗಿದೆ.
ಜಮೀನಿನ ವಿಚಾರದಲ್ಲಿ ಚೆಲುವರಾಜು ಆತನ ಪುತ್ರ ಕಾಂತರಾಜು, ನವೀನ ಅವರನ್ನು ಕೊಲೆ ಮಾಡಿದ್ದಾರೆ ಎಂದು ನವೀನನ ಪೋಷಕರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಕೆ ಆರ್ ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story




