ಮಂಡ್ಯ | ಹಳ್ಳದಲ್ಲಿ ಈಜಲು ಹೋದ ಯುವಕರಿಬ್ಬರು ಮೃತ್ಯು

ಮಂಡ್ಯ : ಹಳ್ಳದಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಕ್ಯಾತಘಟ್ಟ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮದ್ದೂರು ತಾಲೂಕಿನ ಆಲಭುಜನಹಳ್ಳಿ ಗ್ರಾಮದ ಚೇತನ್ ಮತ್ತು ದರ್ಶನ್ ಮೃತ ಯುವಕರಾಗಿದ್ದು, ಈ ಇಬ್ಬರು ಗ್ರಾಮದ ಬಳಿ ಇರುವ ಹೆಬ್ಬಳದಲ್ಲಿ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮುಳಗಿದ್ದ ಇಬ್ಬರ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಮೇಲೆತ್ತಿದ್ದು, ಮೃತರ ದೇಹದ ಶವಸಂಸ್ಕಾರವ ರವಿವಾರ ನಡೆಯಿತು.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





