ಮಂಡ್ಯ | ವಿಡಿಯೋ ಮಾಡುವ ವೇಳೆ ಆಯತಪ್ಪಿ ನದಿಗೆ ಬಿದ್ದ ಆಟೋ ಚಾಲಕ; ಅಗ್ನಿಶಾಮಕ ದಳದಿಂದ ಶೋಧ

ಮಂಡ್ಯ : ಕಾವೇರಿ ನದಿ ದಡದಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ಆಟೊ ಚಾಲಕನೊಬ್ಬ ಆಯತಪ್ಪಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮದ ಬಳಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಉಲ್ಲಂಗಾಲ ಗ್ರಾಮದ ಮಲ್ಲೇಶ್ ಅವರ ಮಗ ಮಹೇಶ್(30) ನದಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿ. ನದಿಯಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದ್ದಾರೆ.
ಮಹೇಶ್ ನದಿ ತೀರದಲ್ಲಿ ನಿಂತು ವಿಡಿಯೊ ಮಾಡುತ್ತಿದ್ದಾಗ ಆಯತಪ್ಪಿ ನದಿಗೆ ಬಿದ್ದನೆಂದು ಆತನ ಜತೆಯಲ್ಲಿ ಬಂದಿದ್ದ ಸ್ನೇಹಿತ ಕೃಷ್ಣ ಎಂಬಾತ ಹೇಳಿಕೆ ನೀಡಿದ್ದಾರೆ ಎಂದು ಕೆಆರ್‌ಎಸ್ ಠಾಣೆ ಪಿಎಸ್‌ಐ ರಮೇಶ್ ಕರ್ಕಿಕಟ್ಟೆ ತಿಳಿಸಿದ್ದಾರೆ.
Next Story





