ಶ್ರೀರಂಗಪಟ್ಟಣ | ನಾಲೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಚಂದನ್(19)
ಮಂಡ್ಯ, ಆ.13 : ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪದ ವರುಣಾ ನಾಲೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೈಸೂರಿನ ಹೂಟಗಳ್ಳಿ ನಿವಾಸಿ ಚಂದನ್(19) ಮೃತ ಯುವಕನಾಗಿದ್ದು, ಸ್ನೇಹಿತರ ಜೊತೆಯಲ್ಲಿ ನಾಲೆಯಲ್ಲಿ ಈಜುತ್ತಿದ್ದ ವೇಳೆ ಈ ಧುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಯುವಕ ಮೈಸೂರಿನ ಶೇಷಾದ್ರಿಪುರಂ ಕಾಲೇಜಿಲ್ಲಿ ಬಿಸಿಎ ಓದುತ್ತಿದ್ದು, ಮಂಗಳವಾರ ಸಂಜೆ ಸ್ನೇಹಿತರ ಜೊತೆ ನಾಲೆಯಲ್ಲಿ ಈಜುವ ವೇಳೆ ಕೊಚ್ಚಿ ಹೋಗಿದ್ದ. ಬುಧವಾರ ಘಟನಾ ಸ್ಥಳದಿಂದ 1ಕಿ.ಮೀ. ದೂರದ ನಾಲೆಯಲ್ಲಿ ಮೃತ ಚಂದನ್ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಕೆ. ಆರ್. ಎಸ್ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





