Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಸೈದ್ಧಾಂತಿಕ ಗುರುತುಗಳು

ಸೈದ್ಧಾಂತಿಕ ಗುರುತುಗಳು

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,15 Nov 2026 1:02 PM IST
share
ಸೈದ್ಧಾಂತಿಕ ಗುರುತುಗಳು

ಮನುಷ್ಯರು ಯಂತ್ರದ ಉತ್ಪನ್ನಗಳು ಅಲ್ಲವಾದ್ದರಿಂದ ಜೈವಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಭಿನ್ನತೆಗಳನ್ನು ಹೊಂದಿರುತ್ತಾರೆ. ಅದೇ ರೀತಿ ಸೈದ್ಧಾಂತಿಕವಾಗಿಯೂ ಕೂಡಾ ಭಿನ್ನತೆಗಳನ್ನು ಇರುವವರು. ಒಂದೇ ಕುಟುಂಬದ ಸದಸ್ಯರು ಭಿನ್ನವಾದ ಆಲೋಚನೆ, ಅಭಿರುಚಿ ಮತ್ತು ನಿಲುವುಗಳನ್ನು ಹೊಂದಿರುವಾಗ ಒಂದು ಸಮಾಜದಲ್ಲಿ ಏಕಪ್ರಕಾರವಾಗಿ ಆಲೋಚಿಸಬೇಕು ಎಂಬ ನಿರೀಕ್ಷೆಯೇ ಅಸಹಜವಾದದ್ದು. ಸಮಾಜದ ಬೌದ್ಧಿಕ ಬೆಳವಣಿಗೆಗೆ ಸೈದ್ಧಾಂತಿಕ ಭಿನ್ನತೆಗಳು ಅಗತ್ಯವೂ ಹೌದು. ಹೊಸ ವಿಚಾರಗಳ ಹುಟ್ಟು, ಹಳೆಯ ನಂಬಿಕೆಗಳ ಪರಿಷ್ಕರಣೆ, ಸಾಮಾಜಿಕ ಮೌಲ್ಯಗಳ ಮರುಪರಿಶೀಲನೆ ಮತ್ತು ವ್ಯವಸ್ಥೆಗಳ ಬದಲಾವಣೆಗಳಿಗೆ ಭಿನ್ನಾಭಿಪ್ರಾಯಗಳು ಪ್ರೇರಕ ಶಕ್ತಿಗಳಾಗಿರುತ್ತವೆ.

ಆದರೆ ಭಿನ್ನಾಭಿಪ್ರಾಯಗಳು ಸಂಘರ್ಷಗಳಾಗಿ, ಸಂಘರ್ಷಗಳು ವೈಯಕ್ತಿಕ ದ್ವೇಷಗಳಾಗಿ, ದ್ವೇಷಗಳು ಅವಹೇಳನಕಾರಿ ಭಾಷೆ ಮತ್ತು ಅಮಾನವೀಯ ವರ್ತನೆಗಳಾಗಿ ರೂಪಾಂತರಗೊಳ್ಳುವುದು ಆತಂಕಕಾರಿ ಬೆಳವಣಿಗೆ. ಅದರಲ್ಲಿಯೂ ಜೀವನ ಪ್ರೀತಿ, ಜೀವದಯೆ, ಸಮಸಮಾಜ, ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಮಾನವೀಯತೆಯನ್ನು ಪ್ರತಿಪಾದಿಸುವವರಲ್ಲಿಯೂ ಕೆಲವೊಮ್ಮೆ ಇಂತಹ ವರ್ತನೆಗಳು ಕಂಡುಬರುವುದು ಒಂದು ಗಂಭೀರ ವೈರುಧ್ಯವನ್ನು ನಮ್ಮ ಮುಂದೆ ಇರಿಸುತ್ತದೆ.

ಮನುಷ್ಯನ ಘನತೆಯನ್ನು ಪ್ರತಿಪಾದಿಸುವ ವ್ಯಕ್ತಿಯು ತನ್ನ ವಿರೋಧಿಯ ಮಾನವೀಯ ಘನತೆಯನ್ನು ನಿರಾಕರಿಸುವುದು ಹೇಗೆ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ವ್ಯಕ್ತಿಯು ಭಿನ್ನಾಭಿಪ್ರಾಯವನ್ನು ಸಹಿಸಿಕೊಳ್ಳಲು ವಿಫಲನಾಗುವುದು ಏಕೆ? ವಿವೇಚನೆ ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರತಿಪಾದಿಸುವ ವ್ಯಕ್ತಿಯು ತನ್ನ ನಿಲುವಿನ ವಿಮರ್ಶೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಏಕೆ? ಇವು ಕೇವಲ ನೈತಿಕ ಪ್ರಶ್ನೆಗಳಲ್ಲ. ಮನುಷ್ಯನ ಮನಸ್ಸಿನ ಕಾರ್ಯವಿಧಾನಕ್ಕೆ ಸಂಬಂಧಿಸಿದ ಮನೋವೈಜ್ಞಾನಿಕ ಪ್ರಶ್ನೆಗಳೂ ಹೌದು.

ಇಲ್ಲಿ ನಾವು ಮುಖ್ಯವಾಗಿ ಪರಿಶೀಲಿಸ ಬೇಕಾದದ್ದು ವಿರೋಧಿಗಳ ಭಾಷೆಯಲ್ಲ; ಆ ಭಾಷೆಯನ್ನು ಹುಟ್ಟಿಸುವ ಮನೋಪ್ರಕ್ರಿಯೆಗಳು.

ಅದರಲ್ಲಿ ಸಿದ್ಧಾಂತವೂ ಮತ್ತು ಅದು ಮನುಷ್ಯನ ಮಾನಸಿಕ ಗುರುತನ್ನು ರೂಪಿಸುವಲ್ಲಿ ವಹಿಸುವ ಪ್ರಧಾನ ಪಾತ್ರವನ್ನೂ ಗುರುತಿಸಬೇಕಾಗುತ್ತದೆ. ಏಕೆಂದರೆ ಸಿದ್ಧಾಂತವೆಂದರೆ ಕೆಲವು ವಿಚಾರಗಳ ಅಥವಾ ನಂಬಿಕೆಗಳ ಸಮೂಹ ಮಾತ್ರವಲ್ಲ. ಬಹಳಷ್ಟು ಬಾರಿ ಅದು ವ್ಯಕ್ತಿಗೆ ಜಗತ್ತನ್ನು ಅರ್ಥ ಮಾಡಿಕೊಳ್ಳುವ ಚೌಕಟ್ಟನ್ನೂ, ತನ್ನ ಸಾಮಾಜಿಕ ಸ್ಥಾನವನ್ನು ಗುರುತಿಸಿಕೊಳ್ಳುವ ಆಧಾರವನ್ನೂ, ಬದುಕಿನ ಉದ್ದೇಶವನ್ನೂ ಒದಗಿಸುತ್ತದೆ.

ಒಬ್ಬ ವ್ಯಕ್ತಿ ತನ್ನನ್ನು ಪ್ರಗತಿಪರ, ಸಂಪ್ರದಾಯವಾದಿ, ಧಾರ್ಮಿಕ, ನಾಸ್ತಿಕ, ರಾಷ್ಟ್ರೀಯವಾದಿ, ಸಮಾಜವಾದಿ ಅಥವಾ ಮಾನವತಾವಾದಿ ಎಂದು ಗುರುತಿಸಿಕೊಳ್ಳಬಹುದು. ಈ ಗುರುತುಗಳು ಒಬ್ಬ ವ್ಯಕ್ತಿಯ ಸಾಮಾಜಿಕ ಅಸ್ತಿತ್ವದ ಭಾಗವಾಗುವುದು ಅಸಹಜವೇನಲ್ಲ.

ಹೆನ್ರಿತಾ ಜ್ಫೆಲ್ ಮತ್ತು ಜಾನ್ ಟರ್ನರ್ ಅವರ ಸಾಮಾಜಿಕ ಗುರುತು ತಾತ್ವಿಕ ಚಿಂತನೆಯ ಪ್ರಕಾರ (Social Identity Theory) ಮನುಷ್ಯನ ಸ್ವಪರಿಕಲ್ಪನೆಯ ಒಂದು ಭಾಗವು ಅವನು ಗುರುತಿಸಿಕೊಳ್ಳುವ ಸಾಮಾಜಿಕ ಗುಂಪುಗಳಿಂದ ರೂಪುಗೊಳ್ಳುತ್ತದೆ. ಅಂದರೆ ವ್ಯಕ್ತಿಯು ತನ್ನನ್ನು ಕೇವಲ ಸ್ವತಂತ್ರ ವ್ಯಕ್ತಿಯಾಗಿ ಮಾತ್ರವಲ್ಲದೆ, ನಿರ್ದಿಷ್ಟ ಸಮುದಾಯ, ಸಂಘಟನೆ, ಸಿದ್ಧಾಂತ ಅಥವಾ ಗುಂಪಿನ ಸದಸ್ಯನಾಗಿಯೂ ಗುರುತಿಸಿಕೊಳ್ಳುತ್ತಾನೆ ಮತ್ತು ಹಾಗೆಯೇ ಗ್ರಹಿಸಿಕೊಳ್ಳುತ್ತಾನೆ. ಆದರೆ ಈ ಗುರುತಿನೊಂದಿಗೆ ವ್ಯಕ್ತಿಯ ಆತ್ಮಗೌರವ ಮತ್ತು ಸಾಮಾಜಿಕ ಸ್ವೀಕೃತಿಯ ಅಗತ್ಯಗಳು ಅತ್ಯಂತ ಗಾಢವಾಗಿ ಬೆಸೆದುಕೊಂಡಾಗ ಸಮಸ್ಯೆಗಳು ಉದ್ಭವಿಸಬಹುದು.

ಯಾವಾಗ ನನ್ನ ಸಿದ್ಧಾಂತವೇ ನನ್ನ ಗುರುತು. ನನ್ನ ಗುರುತೇ ನನ್ನ ಮೌಲ್ಯ. ಆದ್ದರಿಂದ ನನ್ನ ಸಿದ್ಧಾಂತದ ಮೇಲಿನ ದಾಳಿ ನನ್ನ ಮೇಲಿನ ದಾಳಿ; ಎಂಬಷ್ಟು ವೈಯಕ್ತಿಕವಾಗಿ ಸಮೀಕರಿಸಿಕೊಳ್ಳುತ್ತಾರೋ ಆಗ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಹಾಗಂತ ಸೈದ್ಧಾಂತಿಕ ಗುರುತುಗಳನ್ನು ಹೊಂದಿರುವವರೆಲ್ಲರಲ್ಲೂ ಇದಾಗುತ್ತದೆ ಎಂದೇನಿಲ್ಲ. ಆದರೆ ನಮ್ಮ ನಡುವೆ ನಡೆಯುವ ಸೈದ್ಧಾಂತಿಕ ಸಂಘರ್ಷಗಳನ್ನು ಅರ್ಥ ಮಾಡಿಕೊಳ್ಳಲು ಇದೊಂದು ಮನೋವೈಜ್ಞಾನಿಕ ಸಾಧ್ಯತೆ ಎಂದು ಹೇಳಬಹುದು.

ಹಾಗೆಯೇ ಇಲ್ಲಿ ಗುರುತಿನ ಬೆಸುಗೆ (Identity Fusion) ಎಂಬ ಪರಿಕಲ್ಪನೆಯನ್ನೂ ಗಮನಿಸಬಹುದು. ವಿಲಿಯಂ ಸ್ವಾನ್ ಮತ್ತು ಸಂಗಡಿಗರು ಅಧ್ಯಯನ ಮಾಡಿದ ಈ ಪರಿಕಲ್ಪನೆಯು ವೈಯಕ್ತಿಕ ಗುರುತು ಮತ್ತು ಗುಂಪಿನ ಗುರುತು ಅತ್ಯಂತ ಗಾಢವಾಗಿ ಒಂದಾಗುವ ಸ್ಥಿತಿಯನ್ನು ವಿವರಿಸುತ್ತದೆ.

ಸಾಮಾನ್ಯ ಸಾಮಾಜಿಕ ಗುರುತಿಸುವಿಕೆ ಮತ್ತು ಗುರುತುಗಳ ಗಾಢ ಬೆಸುಗೆಯ ನಡುವೆ ವ್ಯತ್ಯಾಸವಿದೆ. ಸಿದ್ಧಾಂತವು ವ್ಯಕ್ತಿಯ ಚಿಂತನೆಯ ಭಾಗವಾಗಿರುವುದಕ್ಕೂ, ಅದೇ ಸಿದ್ಧಾಂತವು ವ್ಯಕ್ತಿಯ ಸಮಸ್ತ ಅಸ್ತಿತ್ವವನ್ನೇ ಪ್ರತಿನಿಧಿಸುವ ಗುರುತಾಗುವುದಕ್ಕೂ ಗಮನಾರ್ಹ ವ್ಯತ್ಯಾಸವಿದೆ.

ಮೊದಲನೆಯ ಸ್ಥಿತಿಯಲ್ಲಿ ವ್ಯಕ್ತಿ ತನ್ನ ಸಿದ್ಧಾಂತವನ್ನು ಪರಿಶೀಲಿಸಬಹುದು. ಎರಡನೆಯ ಸ್ಥಿತಿಯಲ್ಲಿ ಅದರ ವಿಮರ್ಶೆಯು ತನ್ನ ಅಸ್ತಿತ್ವಕ್ಕೆ ಒಡ್ಡುವ ಬೆದರಿಕೆಯಾಗಿ ತೋರುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಬಹಳಷ್ಟು ಜನರು ಅವರ ಧಾರ್ಮಿಕ, ರಾಜಕೀಯ ಅಥವಾ ಯಾವುದೇ ಬಗೆಯ ಗುರುತಿನ ಸಿದ್ಧಾಂತವನ್ನು ವಿರೋಧಿಸಿದರೆ ತಮ್ಮ ಅಸ್ತಿತ್ವಕ್ಕೇ ಬೆದರಿಕೆ ಉಂಟಾದಂತೆ ಕನಲುವರು. ತಮ್ಮ ಉಳಿವಿಗಾಗಿ ಮಾಡುವ ಹೋರಾಟದಂತೆ ವರ್ತಿಸುವರು. ಸಿದ್ಧಾಂತವೆಂಬುದು ಯಾವುದೇ ವ್ಯಕ್ತಿಯ ಚಿಂತನೆಯ ಭಾಗವಾಗಿದ್ದು ಅದನ್ನು ಪರಿಶೀಲನೆಗೆ ಒಳಪಡಿಸಿಕೊಳ್ಳಲು ಬಯಸುವುದು ಮತ್ತು ತೆರೆದುಕೊಳ್ಳುವುದು ಸಂವಾದ ಯೋಗ್ಯ ಆರೋಗ್ಯಕರ ಸಮಾಜಕ್ಕೆ ಕಾರಣವಾಗುವುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಿದ್ಧಾಂತದೊಂದಿಗೆ ತಮ್ಮ ಅಸ್ತಿತ್ವವನ್ನೇ ಸಮೀಕರಿಸಿಕೊಂಡಷ್ಟು ಗಾಢ ಬೆಸುಗೆ ಇದ್ದಲ್ಲಿ ಅವರ ನಡುವೆಯೇ ಸಂಘರ್ಷ ಮತ್ತು ವೈಯಕ್ತಿಕ ಹೋರಾಟಗಳಾಗುವುದು. ಹೇಳುವುದು ಸೈದ್ಧಾಂತಿಕ ಸಂಘರ್ಷವೆಂದಾದರೂ ಅದು ಅವರ ಅಸ್ತಿತ್ವದ ಅಳಿವು ಉಳಿವಿನ ಸಂಘರ್ಷವಾಗಿಯೇ ಅಂತರಂಗದಲ್ಲಿ ಭಾವಿಸಿರುತ್ತಾರೆ.

(ಅಂಕಣಕಾರರು: ಹಿರಿಯ ಬರಹಗಾರರು, ಚಿಂತಕರು)

Tags

Theoretical
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X