Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಕತ್ತಲೆಯಲ್ಲೇ ಬೆಳಕು ಕೊಡುವವರು ಈ ಪವರ್...

ಕತ್ತಲೆಯಲ್ಲೇ ಬೆಳಕು ಕೊಡುವವರು ಈ ಪವರ್ ಮ್ಯಾನ್‌ಗಳು!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ1 Jun 2025 1:09 PM IST
share
ಕತ್ತಲೆಯಲ್ಲೇ ಬೆಳಕು ಕೊಡುವವರು ಈ ಪವರ್ ಮ್ಯಾನ್‌ಗಳು!
ಮೊನ್ನೆ ನಮ್ಮೂರ ಕೂಡುರಸ್ತೆಯಲ್ಲಿ ಹತ್ತಾರು ಕಂಬಗಳು ಸೇರುವ ತಂತಿ ಸಮೂಹದಲ್ಲಿ ಮೇಲೇರಿ ರಿಪೇರಿ ಮಾಡುತ್ತಿದ್ದ ಲೈನ್‌ಮನ್ ನನಗೆ ನಾಗರಿಕತೆ ಎಂಬ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಜೀವಂತ ಜಂತುವಿನ ಹಾಗೆ ಕಂಡುಬಂದ. ಹತ್ತಾರು ಕಡೆಯಿಂದ ಬರುವ ಆ ತಂತಿಗಳ ಯಾವುದೋ ಒಂದುಮೂಲೆಯಲ್ಲಿ ಇನ್ಯಾರೋ ಅಪ್ಪಿ ತಪ್ಪಿ ವಿದ್ಯುತ್ ಕೊಟ್ಟರೆ ಇವನ ಪರಿಸ್ಥಿತಿ ಏನಾಗಬಹುದೆಂದು ಸುಮ್ಮಗೆ ನಿಂತು ಯೋಚಿಸುತ್ತಿದ್ದೆ. ಆಗಾಗ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ತಂತಿಗಳ ಮೇಲೆ ನೇತಾಡುವ ಇಂತಹ ಜೀವಗಳನ್ನು ನೋಡುತ್ತಿರುತ್ತೇವೆ. ಲೋಕದ ಸುಖಕ್ಕಾಗಿ ಸದಾ ಸೈನಿಕರ ಹಾಗೆ ದುಡಿಯುವ ಇವರನ್ನು ಮನಸ್ಸಿನಲ್ಲಾದರೂ ನಾವು ಒಮ್ಮೆ ವಿಜಯಪೀಠಕ್ಕೇರಿಸುವ.

ಯುದ್ಧದ ಸಂದರ್ಭದಲ್ಲಿ ಸೈನಿಕರನ್ನು ವಿಜಯಪೀಠಕ್ಕೇರಿಸಿ ಅಭಿನಂದಿಸುವುದು, ಸಂಭ್ರಮಿಸುವುದು ನಡೆದೇ ಇದೆ. ಇದು ನಮ್ಮ ರಾಷ್ಟ್ರ ಪ್ರೇಮ, ದೇಶ ರಕ್ಷಣೆಯ ಬದ್ಧತೆಯೂ ಹೌದು. ಆದರೆ ಇದೇ ಪ್ರಜಾತಂತ್ರದ ದಿನವಹಿ ಆಗು ಹೋಗುಗಳಲ್ಲಿ ನಿಜರಕ್ಷಕರ ಹಾಗೆ ದುಡಿಯುವ ಇನ್ನೂ ಅನೇಕ ಸೈನಿಕರಿದ್ದಾರೆ. ಬಹಳ ಮುಖ್ಯವಾಗಿ ಪವರ್ ಮ್ಯಾನ್‌ಗಳು ಅಥವಾ ವಿದ್ಯುತ್ ತಂತಿ ಕೆಲಸಗಾರರು.

ಕಳೆದ ಹತ್ತು ದಿವಸದಿಂದ ಕರ್ನಾಟಕದಾದ್ಯಂತ ಮುಂಗಾರು ಮತ್ತು ಚಂಡಮಾರುತ ಒಟ್ಟಾಗಿ ಮೇಳೈಸಿ ಒಂದೇ ಸಮನೆ ಬಿರುಗಾಳಿ ಸಮೇತ ಬೀಸುಮಳೆ ಸುರಿಯುತ್ತಿದೆ. ಎಲ್ಲರ ಹಾಗೆ ಇಷ್ಟು ಬೇಗ ಮಳೆಗಾಲ ಆರಂಭವಾಗುತ್ತದೆ ಎನ್ನುವ ಸುಳಿವು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೂ ಸಿಗದೆ ಯಾವ ತಯಾರಿಯೂ ಇಲ್ಲದೆ ಕೂತಿದ್ದ ಇಲಾಖೆಗೆ ನೂರಾರು ಸಂಕಷ್ಟಗಳು ಒಮ್ಮೆಲೇ ಬಂದೆರಗಿದೆ.

ನಿಮಗೆ ಗೊತ್ತಿರಬೇಕು, ಯಾವುದೋ ಹಳ್ಳಿಯಲ್ಲೀಗ ಕೂತು ಈ ಲೇಖನ ಓದುವ ನೀವು ಕೂಡ ಕಳೆದ ಒಂದು ವಾರದಿಂದ ಕತ್ತಲೆಯಲ್ಲೇ ಇರಬೇಕು. ಮನೆ ತುಂಬಾ ಪದೇ ಪದೇ ಸ್ವಿಚ್ ಅದುಮುವಿರಿ. ಅಭ್ಯಾಸ ಬಲ, ಬರೀ ಬೆಳಕಲ್ಲ ಯಾವ ಯಾಂತ್ರಿಕ ಪರಿಕರವೂ ಓಡುವುದಿಲ್ಲ. ನಾಗರಿಕರಂತೆ ನಮ್ಮ ಹಳ್ಳಿ ಜನ ಕೂಡ ಎಷ್ಟೊಂದು ಸುಲಭ ಬದುಕಿಗೆ ಬದಲಾಗಿದ್ದಾರೆ ಎಂದರೆ ಮಾಡಿನಿಂದ ಸುರಿಯುವ ಮುಗಿಲ ನೀರನ್ನು ಒಂದು ಕೊಡ ಎತ್ತಿಕೊಳ್ಳದಷ್ಟು ಸೋಮಾರಿಗಳಾಗಿದ್ದಾರೆ. ಬಹುತೇಕ ಜನರ ಮನೆಯಲ್ಲಿ ಕೈಮಸಾಲೆ ಕಡೆಯುವ ಕಲ್ಲುಗಳೇ ಈಗ ಇಲ್ಲ. ಸ್ನಾನದ ಬಿಸಿನೀರ ಬಚ್ಚಲು ಮನೆಗಳಿಲ್ಲ. ಬಟ್ಟೆ ಒಗೆಯುವ ಕಲ್ಲುಗಳಿಲ್ಲ. ಮೊಬೈಲುಗಳಿಲ್ಲದೆ ಬದುಕೇ ಇಲ್ಲ. ಪ್ರತಿಯೊಂದಕ್ಕೂ ಕರೆಂಟನ್ನು ನಂಬಿದ ಗ್ರಾಮೀಣ ಜಗತ್ತು ಬಹಳ ವರ್ಷಗಳ ಆನಂತರ ವಾರದಿಂದ ಕತ್ತಲೆಯಲ್ಲಿದೆ.

ಗ್ರಾಮೀಣ ಪ್ರದೇಶದ ವಿದ್ಯುತ್ ದಾರಿ ಅಯೋಮಯವಾಗಿದೆ. ಮುಖ್ಯವಾಗಿ ಮಲೆನಾಡಿನಾದ್ಯಂತ ಸಾವಿರಾರು ಕಂಬಗಳು ನೆಲಕ್ಕುರುಳಿರಬಹುದು. ತಂತಿಗಳು ಕಡಿದು ನೆಲಕ್ಕಂಟಿರಬಹುದು. ಬಯಲುಸೀಮೆಯಲ್ಲಿ ಕರೆಂಟ್ ದಾರಿಗಳು ಸ್ವಲ್ಪ ತೆರೆದಿದ್ದರೂ ಮಲೆನಾಡು ಕರಾವಳಿಯಲ್ಲಿ ನಗರಗಳನ್ನುಳಿದು ಶೇ. 80ರಷ್ಟು ತಂತಿ ಚಲಿಸುವುದು ಕಾಡು, ಬೆಟ್ಟ, ಹೊಳೆಬದಿ, ತೋಟಗಳ ನಡುವೆ. ಒಂದೋ ಅದು ಅರಣ್ಯ ಇಲಾಖೆಗೆ ಸೇರಿದ ಭೂಪ್ರದೇಶವಾಗಿರುತ್ತದೆ. ತಪ್ಪಿದರೆ ಖಾಸಗಿ ಕೃಷಿಕರ ಜಮೀನುಗಳಲ್ಲಿ ಇರುತ್ತವೆ.

ಇಂತಹ ಕಾಡುಗುಡ್ಡಗಳಲ್ಲಿ ತಂತಿದಾರಿಗಳು ಚಲಿಸುವಾಗ ಒಂದಷ್ಟು ಇಕ್ಕಟ್ಟಿನ ಸಮಸ್ಯೆಗಳು ಇದ್ದೇ ಇರುತ್ತವೆ. ಇಲ್ಲೆಲ್ಲ ಈ ಬಾರಿ ಬಿರುಗಾಳಿ ಪ್ರೇರಿತ ಮಳೆಗೆ ಭಾರೀ ಪ್ರಮಾಣದ ಅನಾಹುತಗಳು ನಡೆದಿವೆ. ಒಂದು ಕಡೆ ಗ್ರಾಮೀಣ ಪ್ರದೇಶದ ಕುಡಿವ ನೀರಿನ ಯೋಜನೆಗೆ ರಸ್ತೆಯಂಚಿನಲ್ಲಿ ಬಗೆದ ಪೈಪು ಕಣಿಗಳು, ತಂತಿಗೆ ತಾಗಿಕೊಂಡೇ ಬಿದ್ದು ಬೀಳದ ಸ್ಥಿತಿಯಲ್ಲಿ ವೈಯಾರವಾಡುವ ಬಾಗಿದ ಮರಗಳು, ನೇತಾಡುವ ತಂತಿಗಳ ಕಂಪನಕ್ಕೆ ಸಡಿಲಗೊಂಡ ಕಂಬಗಳು... ಹೀಗೆ ತಂತಿಗಳು ಉರುಳಲು ಕಾರಣಗಳು ನೂರಾರು.

ಇಂಥ ಸಂದರ್ಭದಲ್ಲಿ ಕತ್ತಲೆಯ ಜಗತ್ತಿಗೆ ಮತ್ತೆ ಬೆಳಕು ಕೊಡಬೇಕು ಎಂದು ಮೊನ್ನೆಯಿಂದ ಸತತ ಹಗಲಿರುಳು ಶಸ್ತ್ರ ಸಜ್ಜಿತ ಸೈನಿಕರ ಹಾಗೆ ಹೋರಾಡುತ್ತಿರುವವರು ಈ ಪವರ್ ಮ್ಯಾನ್‌ಗಳು. ವಿದ್ಯುತ್ ಶಕ್ತಿ ಕೇಂದ್ರಗಳಿಗೆ ಮೇಲಿಂದ ಮೇಲೆ ಬರುವ ಸಾರ್ವಜನಿಕ ಕರೆಗಳು, ಜನಪ್ರತಿನಿಧಿಗಳು ಶಾಸಕರು ಸಂಸದರಾದಿಯಾಗಿ ಮುಗಿಬೀಳುವ ಒತ್ತಡಗಳು, ಇವೆಲ್ಲವುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು ಆದ್ಯತೆಗೆ ಅನುಗುಣವಾಗಿ ಬಿದ್ದು ಹೋದ ಕಂಬಗಳನ್ನು, ನೆತ್ತಿ ತುಂಡಾದ ತಂತಿಗಳನ್ನು ಮತ್ತೆ ಜೋಡಿಸಿ ಹಳ್ಳಿಗಳಿಗೆ ಬೆಳಕು ಹರಿಸುವುದು ಅಸಾಮಾನ್ಯ ಕೆಲಸವೇ ಸರಿ. ಹಾಗಂತ ಜೋಡಿಸಿ ಇನ್ನೇನು ವಿದ್ಯುತ್ ಹರಿಸುವ ಹೊತ್ತಿಗೇ ಮತ್ತೆ ಬೀಸುಗಾಳಿ, ಮತ್ತೆ ಮರ ಬೀಳುವುದು, ಕಂಬ ಜರಗುವುದು ಇದ್ದೇ ಇದೆ.

ಹಾಗಂತ ಬಾಗಿದ ಮರವನ್ನು ಕಡಿದು ದಾರಿ ಮುಕ್ತಗೊಳಿಸಿ ತಂತಿ ಜೋಡಿಸುವ ಎಂದರೆ ಅರಣ್ಯ ಇಲಾಖೆಯ ತಕರಾರು. ನಮ್ಮ ರೈತರೇನು ಸೊಬಗರಲ್ಲ, ತೋಟದ ಒಳಗಡೆಯ ತಂತಿಯ ಮೇಲೆ ಒಂದು ಅಡಿಕೆ ಸೋಗೆ ಬಿದ್ದಾಗ ಪವರ್ ಮ್ಯಾನ್‌ಗಳಿಗೆ ಕಾಲ್ ಮಾಡಿ ಕರೆಯುವ ಎಷ್ಟೋ ಕೃಷಿಕರು ನಮ್ಮ ಗ್ರಾಮಗಳಲ್ಲಿದ್ದಾರೆ. ತನ್ನ ಮನೆಯ ವಿದ್ಯುತ್ ವ್ಯವಸ್ಥೆಯನ್ನು, ಯಂತ್ರೋಪಕರಣದ ನಿರ್ವಹಣೆಯನ್ನು ಹೇಗೆ ಸಮರ್ಪಕವಾಗಿಟ್ಟುಕೊಳ್ಳಬೇಕೆನ್ನುವ ಪ್ರಾಥಮಿಕ ಜ್ಞಾನವೇ ಇಲ್ಲದ ಬಳಕೆದಾರರೇ ನಮ್ಮಲ್ಲಿ ಹೆಚ್ಚಿದ್ದಾರೆ.

ಪ್ರತೀ ಮಳೆಗಾಲ ಪೂರ್ವದಲ್ಲಿ ರೈತರನ್ನು ಒಂದು ಕಡೆ ಸೇರಿಸಿ ತುರ್ತು ಸಂದರ್ಭದಲ್ಲಿ ವಿದ್ಯುತ್ ಬಳಕೆದಾರರು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಒಂದು ಪುಟ್ಟ ಮಾಹಿತಿ ಶಿಬಿರವನ್ನು ಈವರೆಗೆ ಯಾವ ಪ್ರಸರಣಾಧಿಕಾರಿಗಳು ಮಾಡಿದ್ದನ್ನು ನಾನು ಗಮನಿಸಿಲ್ಲ. ಅಥವಾ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಮಾಡಿ ಆ ಮೂಲಕ ವಿದ್ಯುತ್ ನಿಲುಗಡೆ, ಹಂಚಿಕೆ, ತುರ್ತು ಸಂದರ್ಭದಲ್ಲಿ ಬಳಕೆದಾರರ ಜವಾಬ್ದಾರಿಗಳ ಬಗ್ಗೆ ಸಲಹೆ ಸೂಚನೆಗಳನ್ನು ಹಂಚಿಕೊಳ್ಳುವ ಕ್ರಮವೂ ಚಾಲ್ತಿಯಲ್ಲಿಲ್ಲ. ನಿಮಗೆ ನೆನಪಿರಬೇಕು, ಕರಾವಳಿಯಲ್ಲಿ ಕಳೆದ ನಾಲ್ಕು-ಐದು ವರ್ಷಗಳಲ್ಲಿ ಅಡಿಕೆ, ಕಾಳುಮೆಣಸು ಕೊಯ್ಯುವ ಕಬ್ಬಿಣದ ಏಣಿಯನ್ನು ರೈತರು ಒಂದು ಕಡೆಯಿಂದ ಇನ್ನೊಂದೆಡೆಗೆ ಒಯ್ಯುವಾಗ ಅದು ಕರೆಂಟ್ ತಂತಿಗೆ ತಾಗಿ ಶಾಕ್ ಹೊಡೆದು ನಾಲ್ಕೈದು ಜನರು ಸತ್ತು ಹೋದ ದುರಂತ ಕಥೆ.

ಮೇಲಧಿಕಾರಿಗಳಿಗೂ, ಬಳಕೆದಾರನಿಗೂ ನೇರವಾಗಿ ಸಿಕ್ಕಿಹಾಕಿಕೊಳ್ಳುವ ಪವರ್ ಮ್ಯಾನ್‌ಗಳು ಕಳೆದ ಒಂದು ವಾರದಲ್ಲಿ ಎಷ್ಟು ಗಂಟೆ ನಿದ್ದೆ ಮಾಡಿದ್ದಾರೆ? ಸರಿಯಾದ ಸಮಯಕ್ಕೆ ಊಟ ಮಾಡಿದ್ದಾರೆಯೇ? ಕರೆಂಟ್ ಇಲ್ಲದೆ ಅವರ ಮೊಬೈಲುಗಳೇ ಸ್ವಿಚ್ ಆಫ್ ಆದಾಗ ಎಷ್ಟು ಬೈಗುಳ ತಿಂದಿದ್ದಾರೆ ಎಂಬುವುದನ್ನು ಅವರಲ್ಲಿ ಕೇಳಬೇಕಷ್ಟೇ.

ಎಷ್ಟೋ ಬಾರಿ ವಿದ್ಯುತ್ ತಂತಿಯ ಒಡನಾಟ ಮರಣದೊಂದಿನ ಸಹವಾಸವೇ ಸರಿ. ಯಾವಾಗ ಯಾವ ತಂತಿಯಲ್ಲಿ ಎಷ್ಟು ಹೊತ್ತಿಗೆ ವಿದ್ಯುತ್ ಹರಿಯುತ್ತದೆ ಅನ್ನುವುದನ್ನು ಊಹಿಸುವುದಕ್ಕೆ ಸಾಧ್ಯವೇ ಇಲ್ಲ. ಕೈಯಾರೆ ಪವರ್ ಕಟ್ ಮಾಡಿ ಬಂದು ಕಂಬಕ್ಕೇರಿದ ಅದೇ ಲೈನ್‌ಮನ್ ಶಾಕ್ ಹೊಡೆದು ಮರಣ ಹೊಂದಿದ ದೃಷ್ಟಾಂತಗಳು ನಮ್ಮ ಕಣ್ಣ ಮುಂದೆ ಇವೆ. ಇನ್ಯಾರದ್ದೋ ಅಚಾತುರ್ಯದಿಂದ, ತಾಂತ್ರಿಕ ಅಡಚಣೆಯಿಂದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅಪಘಾತ ಆದ ದೃಷ್ಟಾಂತಗಳೂ ಇವೆ.

ಊಹಿಸಲಾಗದ ಇಂತಹ ಅನಿರೀಕ್ಷಿತ ಅಪಾಯಗಳಿಂದ ಪಾರಾಗುವ ಸುರಕ್ಷಿತ ಕ್ರಮಗಳನ್ನು ಪವರ್ ಮ್ಯಾನ್‌ಗಳಿಗೆ ಇಲಾಖೆ ಕೊಟ್ಟಿದೆಯೇ? ಜೀವ ಭದ್ರತೆಯ ತರಬೇತಿಯಾಗಲಿ, ಸುರಕ್ಷತೆಯ ಕವಚಗಳಾಗಲಿ, ಉಪಕರಣಗಳಾಗಲಿ ಇಲಾಖೆ ಅವರಿಗೆ ಎಷ್ಟರ ಮಟ್ಟಿಗೆ ನೀಡಿದೆ ಅನ್ನುವುದನ್ನು ಗಮನಿಸಬೇಕು. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಪವರ್ ಲೈನ್‌ಮನ್‌ಗಳು (ವಿದ್ಯುತ್ ತಂತಿ ಕೆಲಸಗಾರರು) ಮಳೆಗಾಲದಲ್ಲಿ ಪ್ರತಿದಿನ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ನಾಗರಿಕ ಸುಲಭದ ಬೆಳಗಿನ ಬದುಕಿಗೆ ಸಾಗಿದ ಹಾಗೆ ಅವನಿಗೆ ಸವಲತ್ತು ಒದಗಿಸುವ ಇಲಾಖೆಗಳು, ವ್ಯಕ್ತಿಗಳು ಒತ್ತಡದಲ್ಲಿ ಇರಬೇಕಾಗುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ.

ಈ ಸಮಸ್ಯೆಗಳು ಕೆಲಸದ ಸ್ವಭಾವ, ಭೌಗೋಳಿಕ ಸ್ಥಿತಿಗತಿ, ಮೂಲಸೌಕರ್ಯದ ಕೊರತೆ ಮತ್ತು ಹವಾಮಾನದಿಂದ ಉಂಟಾಗುತ್ತವೆ. ಭೂಮಿಯ ಮೇಲೆ ನಿಂತು ಕೆಲಸ ಮಾಡುವುದಕ್ಕೂ ಕಂಬದ ಮೇಲೆ ನಿಂತು ನಿಯಂತ್ರಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕರಾವಳಿ ಮತ್ತು ಮಲೆನಾಡಿನಂತಹ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಸಂಭವಿಸಿದಾಗ, ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಕಂಬಗಳು ಮತ್ತು ಜಂಕ್ಷನ್ ಬಾಕ್ಸ್‌ಗಳಿಗೆ ನೀರು ನುಗ್ಗಿ ಹಾನಿಯಾಗುತ್ತವೆೆ. ಉದಾಹರಣೆಗೆ, ಕೊಡಗು ಜಿಲ್ಲೆಯಲ್ಲಿ 2024ರ ಮಾನ್ಸೂನ್‌ನಲ್ಲಿ ಭಾರೀ ಮಳೆಯಿಂದ ಸಾವಿರಾರು ವಿದ್ಯುತ್ ಕಂಬಗಳು ಒಮ್ಮೆಲೆ ಕುಸಿದಿದ್ದವು, ಇದು ಅನುಭವಿ ಲೈನ್‌ಮನ್‌ಗಳಿಗೂ ದುರಸ್ತಿ ಕೆಲಸ ಕಷ್ಟಕರವಾಗಿಸಿತ್ತು. ಗ್ರಾಮೀಣ ರಸ್ತೆಗಳು ಮಳೆಗಾಲದಲ್ಲಿ ಕೆಸರುಮಯವಾಗಿ, ಕೆಲವೊಂದು ಕಡೆ ದುರಸ್ತಿ ಸಾಮಗ್ರಿಗಳನ್ನು ಸಾಗಿಸಲು ಕಷ್ಟವಾಗುತ್ತದೆ. ಚಾರ್ಮಾಡಿ ಘಾಟ್‌ನಂತಹ ಪ್ರದೇಶಗಳಲ್ಲಿ ರಸ್ತೆಗಳ ಮೇಲೆಯೇ ಗುಡ್ಡಜರಿದು ಆಗಾಗ ಸಂಚಾರ ಸ್ಥಗಿತಗೊಳ್ಳುತ್ತದೆ. ಇದು ಲೈನ್‌ಮನ್‌ಗಳಿಗೆ ಸಕಾಲಕ್ಕೆ ತಲುಪಲು ಅಡ್ಡಿಯಾಗಿತ್ತದೆ. ಒದ್ದೆಯಾದ ತಂತಿಗಳ ಮೇಲೆ ಮತ್ತು ಉಪಕರಣಗಳಲ್ಲಿ ಕೆಲಸ ಮಾಡುವಾಗ ವಿದ್ಯುತ್ ಶಾಕ್‌ನ ಅಪಾಯ ಹೆಚ್ಚಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷತಾ ಉಪಕರಣಗಳ ಕೊರತೆಯಿಂದ ಈ ಅಪಾಯ ಮತ್ತಷ್ಟು ತೀವ್ರವಾಗುತ್ತದೆ.

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಲೈನ್‌ಮನ್‌ಗಳಿಗೆ ಗುಣಮಟ್ಟದ ರಬ್ಬರ್ ಗ್ಲೌಸ್, ಇನ್ಸುಲೇಟೆಡ್ ಟೂಲ್ಸ್ ಅಥವಾ ರಕ್ಷಣಾತ್ಮಕ ಗೇರ್‌ಗಳು ಸಿಗದಿರುವುದು ಸಾಮಾನ್ಯ. ಇದರಿಂದ ಅವರು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಭಾರೀ ಮಳೆ, ಗುಡುಗು ಮತ್ತು ಮಿಂಚಿನಿಂದ ಕೆಲಸದ ಸಮಯದಲ್ಲಿ ಜೀವಕ್ಕೆ, ಮನಸ್ಸಿಗೆ ಒತ್ತಡ ಉಂಟಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಕಾಡುಮಯ ಅಥವಾ ದುರ್ಗಮ ಪ್ರದೇಶಗಳಲ್ಲಿ ಇರುವುದರಿಂದ, ಮಳೆಗಾಲದಲ್ಲಿ ಅವುಗಳಿದ್ದಲ್ಲಿಗೆ ತಲುಪುವುದು ಕಷ್ಟವೇ. ದುರಸ್ತಿಗೆ ಅಗತ್ಯವಾದ ವಾಹನಗಳು ಅಥವಾ ಉಪಕರಣಗಳ ಕೊರತೆಯಿಂದ ಲೈನ್‌ಮನ್‌ಗಳು ಕಾಲ್ನಡಿಗೆಯಲ್ಲಿ ದೂರದ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ಅರಣ್ಯ ಇಲಾಖೆಯು ಸೇರಿ ಖಾಸಗಿ ವ್ಯಕ್ತಿಗಳು ತನ್ನ ಮರದ ಗೆಲ್ಲು ಕಡಿಯಬಾರದು, ಕೃಷಿ ಸ್ವತ್ತುಗಳಿಗೆ ಹಾನಿಯಾಗಬಾರದು ಎಂದು ತಕರಾರು ಎತ್ತುವುದು ಕೂಡ ತಂತಿ ಕೆಲಸಗಾರರಿಗೆ ಕಿರಿಕಿರಿಯೇ.

ತೀವ್ರ ಬೀಸು ಗಾಳಿಯ ಮಳೆಗಾಲದಲ್ಲಿ ವಿದ್ಯುತ್ ಕಡಿತದ ದೂರುಗಳು ಹೆಚ್ಚಾಗುವುದರಿಂದ ಸಹಜವಾಗಿಯೇ ಲೈನ್‌ಮನ್‌ಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ಒಬ್ಬರೇ ಹಲವು ಗ್ರಾಮಗಳನ್ನು ಒಳಗೊಂಡ ಕೆಲಸವನ್ನು ಮಾಡಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಲೈನ್‌ಮನ್‌ಗಳಿಗೆ ಸೂಕ್ತ ವೇತನ, ವಸತಿ ಸೌಕರ್ಯ ಅಥವಾ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವುದೂ ದೊಡ್ಡ ಅವರನ್ನು ನೈತಿಕವಾಗಿ ಕುಸಿಯುವಂತೆ ಮಾಡುವ ಸಮಸ್ಯೆಯೇ.

ವಿದ್ಯುತ್ ಕಡಿತದಿಂದ ಬೇಸತ್ತ ಗ್ರಾಮಸ್ಥರು, ಕೆಲವೊಂದು ಮನೆಯಲ್ಲಿ ಕಾರ್ಯಕ್ರಮ ಇಟ್ಟುಕೊಂಡ ಜನರು ಲೈನ್‌ಮನ್‌ಗಳ ಮೇಲೆ ತಕ್ಷಣವೇ ದುರಸ್ತಿ ಮಾಡುವಂತೆ ಒತ್ತಡ ಹೇರುತ್ತಾರೆ, ಇದು ಕೆಲವೊಮ್ಮೆ ಘರ್ಷಣೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಗ್ರಾಮಸ್ಥರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಲೈನ್‌ಮನ್‌ಗಳನ್ನು ದೂಷಿಸುವುದು ಅವರ ಕೆಲಸದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಒದ್ದೆ ಬಟ್ಟೆಗಳಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಶೀತ, ಜ್ವರ ಅಥವಾ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪದೇ ಪದೇ ಇಂತಹ ತುರ್ತು ದುರಸ್ತಿಗಳಿಂದಾಗಿ

ಲೈನ್‌ಮನ್‌ಗಳಿಗೆ ಸರಿಯಾದ ವಿಶ್ರಾಂತಿ ಅಥವಾ ಊಟದ ಸಮಯ ಸಿಗದಿರುವುದು ಮತ್ತೊಂದು ಸಾಮಾನ್ಯ ಸಮಸ್ಯೆ.

ಲೈನ್‌ಮನ್‌ಗಳಿಗೆ ಗುಣಮಟ್ಟದ ಸುರಕ್ಷತಾ ಉಪಕರಣಗಳನ್ನು ಒದಗಿಸಿ, ಆಗಾಗ ತರಬೇತಿ ನೀಡುವುದು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳನ್ನು ಭೂಗತಕ್ಕೆ ಸ್ಥಳಾಂತರಿಸುವುದು ಅಥವಾ ಹಾನಿಗೊಳಗಾಗದಂತಹ ಗಟ್ಟಿಮುಟ್ಟಾದ ಕಂಬಗಳನ್ನು ಅಳವಡಿಸುವುದು ಬಹಳ ಮುಖ್ಯ. ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಲೈನ್‌ಮನ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ಅಗತ್ಯ.

ಮೊನ್ನೆ ನಮ್ಮೂರ ಕೂಡುರಸ್ತೆಯಲ್ಲಿ ಹತ್ತಾರು ಕಂಬಗಳು ಸೇರುವ ತಂತಿ ಸಮೂಹದಲ್ಲಿ ಮೇಲೇರಿ ರಿಪೇರಿ ಮಾಡುತ್ತಿದ್ದ ಲೈನ್‌ಮನ್ ನನಗೆ ನಾಗರಿಕತೆ ಎಂಬ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಜೀವಂತ ಜಂತುವಿನ ಹಾಗೆ ಕಂಡುಬಂದ. ಹತ್ತಾರು ಕಡೆಯಿಂದ ಬರುವ ಆ ತಂತಿಗಳ ಯಾವುದೋ ಒಂದುಮೂಲೆಯಲ್ಲಿ ಇನ್ಯಾರೋ ಅಪ್ಪಿ ತಪ್ಪಿ ವಿದ್ಯುತ್ ಕೊಟ್ಟರೆ ಇವನ ಪರಿಸ್ಥಿತಿ ಏನಾಗಬಹುದೆಂದು ಸುಮ್ಮಗೆ ನಿಂತು ಯೋಚಿಸುತ್ತಿದ್ದೆ. ಆಗಾಗ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ತಂತಿಗಳ ಮೇಲೆ ನೇತಾಡುವ ಇಂತಹ ಜೀವಗಳನ್ನು ನೋಡುತ್ತಿರುತ್ತೇವೆ. ಲೋಕದ ಸುಖಕ್ಕಾಗಿ ಸದಾ ಸೈನಿಕರ ಹಾಗೆ ದುಡಿಯುವ ಇವರನ್ನು ಮನಸ್ಸಿನಲ್ಲಾದರೂ ನಾವು ಒಮ್ಮೆ ವಿಜಯಪೀಠಕ್ಕೇರಿಸುವ.

ಇಷ್ಟಾದರೂ ಕೆಲವೊಂದು ಅಡ್ಡ ಮಾತು ಬಂದೇ ಬರುತ್ತದೆ. ‘‘ಇವರೇನು ವೇತನ ಪಡೆಯುವುದಿಲ್ವಾ, ಪುಕ್ಸಟ್ಟೆ ದುಡಿಯುತ್ತಾರಾ’’ ಎಂಬ ಮಾತು. ಆದರೆ ಈ ದೇಶದಲ್ಲಿ ತಂತಿ ಮೇಲೆ ನಿತ್ಯ ನಿರಂತರ ಸಾವಿನೊಂದಿಗೆ ಸರಸವಾಡುವ ಇಂತಹ ಅಪಾಯಕಾರಿ ಇನ್ನೊಂದು ಕೆಲಸ ಯಾವ ಇಲಾಖೆಯ ಯಾವ ನೌಕರರಿಗೆ ಇದೆ ಎಂಬುದನ್ನು ನೀವೇ ಒಮ್ಮೆ ಲೆಕ್ಕ ಹಾಕಿ.

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X